ADVERTISEMENT

'ಕಾಳಿ’ ಸಾಕ್ಷ್ಯಚಿತ್ರದ ಪ್ರಸ್ತುತಿಯನ್ನು ರದ್ದು ಮಾಡಿದ ಅಗಾ ಖಾನ್ ಮ್ಯೂಸಿಯಂ

ಪಿಟಿಐ
Published 6 ಜುಲೈ 2022, 12:53 IST
Last Updated 6 ಜುಲೈ 2022, 12:53 IST
ನಿರ್ದೆಶಕಿ ಲೀನಾ ಮಣಿಮೆಕಲೈ
ನಿರ್ದೆಶಕಿ ಲೀನಾ ಮಣಿಮೆಕಲೈ    

ಟೊರೊಂಟೊ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಳಿ ಸಾಕ್ಷ್ಯಚಿತ್ರದ ಪ್ರಸ್ತುತಿಯನ್ನು ಕೆನಡಾದ ಅಗಾ ಖಾನ್ ಮ್ಯೂಸಿಯಂ ಕೈಬಿಟ್ಟಿದೆ.

ಹಿಂದೂ ಮತ್ತು ಇತರ ಸಮುದಾಯಗಳ ಜನರಿಗೆ ಘಾಸಿಯುಂಟುಮಾಡಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಒಟ್ಟಾವಾದಲ್ಲಿನ ಭಾರತೀಯ ಮಿಷನ್, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಎಲ್ಲ ಪ್ರಚೋದನಕಾರಿ ಅಂಶಗಳನ್ನು ತೆಗೆದುಹಾಕುವಂತೆ ಕೆನಡಾ ಅಧಿಕಾರಿಗಳಿಗೆ ಒತ್ತಾಯಿಸಿದ ನಂತರ 'ಕಾಳಿ' ಸಾಕ್ಷ್ಯಚಿತ್ರದ ಪ್ರಸ್ತುತಿಯನ್ನು ತೆಗೆದುಹಾಕಲಾಗಿದೆ ಎಂದು ಅಗಾ ಖಾನ್ ಮ್ಯೂಸಿಯಂ ಹೇಳಿದೆ.

ಟೊರೊಂಟೊ ಮೂಲದ ನಿರ್ದೆಶಕಿ ಲೀನಾ ಮಣಿಮೆಕಲೈ ಅವರು, ಕಾಳಿ ಮಾತೆಯು ಎಲ್‌ಜಿಬಿಟಿಕ್ಯೂ ಧ್ವಜ ಹಿಡಿದು ಸಿಗರೇಟ್ ಸೇದುತ್ತಿರುವ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ADVERTISEMENT

ಈ ಪೋಸ್ಟರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಬಂಧಿಸುವಂತೆ ಜಾಲತಾಣಿಗರು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.