ಪ್ಯಾರಿಸ್: ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯನ್ನು ಸಂಪೂರ್ಣ ನಾಶಗೊಳಿಸುವುದೇ ಅಂತರರಾಷ್ಟ್ರೀಯ ಮೈತ್ರಿ ಪಡೆಗಳ ಜವಾಬ್ದಾರಿಯಾಗಿದೆ ಎಂದು ಫ್ರಾನ್ಸ್ ಹೇಳಿದೆ.
ಸಿರಿಯಾದಿಂದ ಸೇನಾ ಪಡೆಯನ್ನು ವಾಪಸ್ ಪಡೆದುಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಅತ್ಯಂತ ಗಂಭೀರವಾದದ್ದು. ಇದರಿಂದ ಹಲವು ರೀತಿಯ ಬದಲಾವಣೆಗಳಾಗಬಹುದು ಎಂದು ವಿದೇಶಾಂಗ ಸಚಿವರಾದ ಫ್ಲೊರೆನ್ಸ್ ಪಾರ್ಲಿ ತಿಳಿಸಿದ್ದಾರೆ.
ಐಎಸ್ ನಾಶವಾಗಿದೆ ಎಂದು ಟ್ರಂಪ್ ಹೇಳುತ್ತಾರೆ. ಆದರೆ, ಸಿರಿಯಾದಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ಐಎಸ್ ಸಂಘಟನೆಯನ್ನು ನಾಶಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ವಿಷಯದಲ್ಲಿ ವಿಫಲವಾದರೆ, ಐಎಸ್ ಮತ್ತೆ ಪುನರ್‌ರಚನೆಯಾಗಿ ಬಲಿಷ್ಠ ಸಂಘಟನೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.