ADVERTISEMENT

ಅಮೆರಿಕಕ್ಕೆ 14 ಲಕ್ಷ ಭಾರತೀಯರ ಭೇಟಿ

2023ರವೇಳೆಗೆ ಶೇ 46ರಷ್ಟು ಬೆಳವಣಿಗೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:18 IST
Last Updated 28 ಜೂನ್ 2019, 19:18 IST
   

ವಾಷಿಂಗ್ಟನ್‌ (ಪಿಟಿಐ): ಅಮೆರಿಕಕ್ಕೆ 2018ರಲ್ಲಿ 14 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳು ಮತ್ತು ವೀಸಾ ನಿರ್ಬಂಧಗಳ ನಡುವೆಯೂ ಅಪಾರ ಸಂಖ್ಯೆಯಲ್ಲಿ ಭಾರತೀಯರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.

‘ಬ್ರ್ಯಾಂಡ್‌ ಅಮೆರಿಕ’ ಸಂಸ್ಥೆಯ ಮೂಲಕ ಅಮೆರಿಕದಲ್ಲಿನ ಪ್ರಮುಖ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.

‘ನಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತ ಅತ್ಯುತ್ತಮ ರಾಷ್ಟ್ರವಾಗಿದೆ. ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುತ್ತಾರೆ. ಬಳಿಕ, ಅವರ ಕುಟುಂಬದ ಸದಸ್ಯರು ಬರುತ್ತಾರೆ. ಜತೆಗೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯವೂ ಹೆಚ್ಚಿನ ಸಂಖ್ಯೆಯಲ್ಲಿದೆ. ಹೀಗಾಗಿ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ’ ಎಂದು ‘ಬ್ರ್ಯಾಂಡ್‌ ಯುಎಸ್‌ಎ’ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್ಟೊಫರ್‌ ತಾಮ್ಸನ್‌ ಹೇಳಿದ್ದಾರೆ.

ADVERTISEMENT

‘ಇತರ ರಾಷ್ಟ್ರಗಳ ಪ್ರವಾಸಿಗರಿಗೆ ಹೋಲಿಸಿದರೆ ಭಾರತೀಯ ಪ್ರವಾಸಿಗರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚು. ದಕ್ಷಿಣ ಕೊರಿಯಾ ಬಳಿಕ, ವಿದೇಶಿ ಪ್ರವಾಸಿಗರಲ್ಲಿ ಭಾರತೀಯರು ಹೆಚ್ಚು ಖರ್ಚು ಮಾಡುತ್ತಾರೆ’ ಎಂದು ತಾಮ್ಸನ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.