ADVERTISEMENT

ವಿಮಾನದ ಲ್ಯಾಂಡಿಂಗ್‌ ಗೇರ್‌ನಲ್ಲಿ ಅಡಗಿಕೊಂಡು ಸಾವಿರಾರು ಕಿ.ಮೀ ಪ್ರಯಾಣಿಸಿದ ಯುವಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2021, 7:03 IST
Last Updated 1 ಡಿಸೆಂಬರ್ 2021, 7:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸರ್ಫ್‌ಸೈಡ್ (ಅಮೆರಿಕ): ಯುವಕನೊಬ್ಬವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು 1,600 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿ ಬದುಕಿ ಉಳಿದಿದ್ದಾನೆ.ಅಮೆರಿಕದ ಮಿಯಾಮಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.

‘ಗ್ವಾಟೆಮಾಲಾದಿಂದ ಮಿಯಾಮಿಗೆ ಚಲಿಸುತ್ತಿದ್ದ ವಿಮಾನದ ಲ್ಯಾಂಡಿಂಗ್‌ ಗೇರ್‌ನಲ್ಲಿ 26 ವರ್ಷದ ಯುವಕ ಅಡಗಿಕೊಂಡು1,600 ಕಿ.ಮೀ ದೂರವನ್ನು ಪ್ರಯಾಣಿಸಿದ್ದಾನೆ. ಆತ ಜೀವಂತವಾಗಿ ಹೊರಬಂದಿದ್ದಾನೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ವಾಟೆಮಾಲಾದಿಂದ ತೆರಳಿದ್ದ ಅಮೆರಿಕನ್‌ ಏರ್‌ಲೈನ್ಸ್ ವಿಮಾನವು ಮಿಯಾಮಿ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಲ್ಯಾಂಡ್‌ ಆಗಿದೆ. ಪ್ರಯಾಣಿಕರು ವಿಮಾನದಿಂದ ಇಳಿಯಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ಯುವಕನೊಬ್ಬ ಲ್ಯಾಂಡಿಂಗ್ ಗೇರ್‌ನ ಕೆಳಭಾಗದಿಂದ ಹೊರ ಬರುವುದನ್ನು ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.

ADVERTISEMENT

‌ಲ್ಯಾಂಡಿಂಗ್‌ ಗೇರ್‌ನಿಂದ ಹೊರಬಂದ ವ್ಯಕ್ತಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಅಲ್ಲಿನ ಭದ್ರತಾ ಸಿಬ್ದಂದಿ ಆತನನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.

ವ್ಯಕ್ತಿಯನ್ನು ವೈದ್ಯಕೀಯ ತ‍‍ಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.