ADVERTISEMENT

ಯುದ್ಧ ಬೇಕಿಲ್ಲ ಎಂದ ಅಮೆರಿಕ: ಟ್ರಂಪ್ ದುಸ್ಸಾಹಸಕ್ಕೆ ಸ್ವದೇಶದಲ್ಲೇ ವಿರೋಧ

ಏಜೆನ್ಸೀಸ್
Published 8 ಜನವರಿ 2020, 2:36 IST
Last Updated 8 ಜನವರಿ 2020, 2:36 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ವಾಷಿಂಗ್‌ಟನ್: ‘ಅಮೆರಿಕ ಮತ್ತು ಜಗತ್ತಿಗೆ ಈಗಮತ್ತೊಂದು ಯುದ್ಧ ಬೇಡವಾಗಿದೆ’ ಎಂದು ಅಮೆರಿಕದ ಹೌಸ್ ಅಫ್ ರೆಪ್ರಸೆಂಟೇಟಿವ್ಸ್‌ನಡೆಮಕ್ರಟಿಕ್ ಪಕ್ಷದ ಸ್ಪೀಕರ್ ನಾನ್ಸಿ ಪೆಲೊಸಿ ಹೇಳಿದ್ದಾರೆ.

ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ ನಡೆಸಿದ ನಂತರ ಪ್ರತಿಕ್ರಿಯಿಸಿರುವ ಅವರು, ತನ್ನ ಸೇನಾ ಸಿಬ್ಬಂದಿ ಮತ್ತು ನಾಗರಿಕರ ಸುರಕ್ಷೆಯನ್ನು ಸರ್ಕಾರ ಖಾತ್ರಿಪಡಿಸಬೇಕು. ಅನಗತ್ಯವಾಗಿ ಯುದ್ಧೋನ್ಮಾದ ಹುಟ್ಟುಹಾಕಬಾರದು. ಇರಾನ್‌ ಸಹ ಶಾಂತಿ ಸ್ಥಾಪನೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇರಾನ್ ದಾಳಿ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷಎಲಿಯಟ್ ಏಂಜಲ್, ‘ಅಮೆರಿಕ ಯುದ್ಧದಲ್ಲಿದೆ ಎಂದೇಈ ದಾಳಿಗಳ ಅರ್ಥ’ ಎಂದು ವಿಶ್ಲೇಷಿಸಿದ್ದಾರೆ.

ADVERTISEMENT

‘ನಮ್ಮ ಅಧ್ಯಕ್ಷರು ಮತ್ತು ಅವರ ಸುತ್ತಲಿರುವ ಸಲಹಾಸಮಿತಿ ಸದಸ್ಯರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಯುದ್ಧೋನ್ಮಾದ ಕಡಿಮೆಯಾಗುವಂಥ ಕ್ರಮಗಳನ್ನು ಘೋಷಿಸಬೇಕು. ಮಾತಿನ ಮೇಲೆ ಹಿಡಿತ ಇರಬೇಕು. ಇಲ್ಲದಿದ್ದರೆ ಮತ್ತೊಂದು ಪೂರ್ಣಪ್ರಮಾಣದ ಯುದ್ಧದಲ್ಲಿ ಅಮೆರಿಕ ಸಿಲುಕಬೇಕಾಗುತ್ತದೆ. ಯಾರಿಗೂ ಅದು ಈಗ ಬೇಕಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.