
ಅನಂತ್ ಅಂಬಾನಿ ಅವರು ಅಮೆರಿಕದ ಗ್ಲೋಬಲ್ ಹ್ಯೂಮನ್ ಸೊಸೈಟಿಯ ಸಿಇಒ ಡಾ. ರಾಬಿನ್ ಗ್ಯಾನ್ಜೆರ್ಟ್ ಅವರಿಂದ ವಿಶ್ವ ಮಾನವೀಯ ಪ್ರಶಸ್ತಿ ಸ್ವೀಕರಿಸಿದರು
ವಾಷಿಂಗ್ಟನ್: ರಿಲಯನ್ಸ್ ಫೌಂಡೇಷನ್ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರದ ಸ್ಥಾಪಕ ಅನಂತ್ ಅಂಬಾನಿ ಅವರಿಗೆ ಅಮೆರಿಕದ ಗ್ಲೋಬಲ್ ಹ್ಯೂಮನ್ ಸೊಸೈಟಿಯು ವಿಶ್ವ ಮಾನವೀಯ ಪ್ರಶಸ್ತಿ ಪ್ರದಾನ ಮಾಡಿದೆ.
ವನ್ಯಜೀವಿ ಸಂರಕ್ಷಣೆಯಲ್ಲಿ ಅನಂತ್ ಅಂಬಾನಿ ಅವರ ದೂರದೃಷ್ಟಿಯ ನಾಯಕತ್ವ, ವೈಜ್ಞಾನಿಕ ಕ್ರಮಗಳನ್ನು ಸಂಸ್ಥೆಯು ಶ್ಲಾಘಿಸಿದೆ. ಅಂತರ
ರಾಷ್ಟ್ರೀಯ ಮಟ್ಟದ ಈ ಪುರಸ್ಕಾರ ಪಡೆದ ಏಷ್ಯಾದ ಮೊದಲಿಗ ಹಾಗೂ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅನಂತ್ ಪಾತ್ರರಾಗಿದ್ದಾರೆ.
ಅಳಿವಿನಂಚಿನಲ್ಲಿರುವ ವನ್ಯಜೀವಿ ತಳಿಗಳನ್ನು ಸಂರಕ್ಷಿಸುವಲ್ಲಿ ಅಂಬಾನಿ ಅವರ ಸುಸ್ಥಿರ ಕ್ರಮಗಳು ನೆರವಾಗಿವೆ. ವನ್ಯಜೀವಿಗಳು ಮತ್ತು ಮನುಷ್ಯರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಲು ಅಜೀವ ಬದ್ಧತೆ ಪ್ರದರ್ಶಿಸುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಮೀಸಲಿಡ
ಲಾಗಿದೆ’ ಎಂದು ಗ್ಲೋಬಲ್ ಹ್ಯೂಮನ್ ಸೊಸೈಟಿಯ ಪ್ರಕಟಣೆ ತಿಳಿಸಿದೆ.
‘ಅತ್ಯುತ್ಕೃಷ್ಟ ಕಾಳಜಿ ಮೂಲಕ ಪ್ರತಿಯೊಂದು ಪ್ರಾಣಿಯ ಘನತೆಯನ್ನು ವಂತಾರ ಎತ್ತಿ ಹಿಡಿದಿದೆ’ ಎಂದು ಗ್ಲೋಬಲ್ ಹ್ಯೂಮನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಿಇಒ ಡಾ. ರಾಬಿನ್ ಗ್ಯಾನ್ಜೆರ್ಟ್ ಹೇಳಿದ್ದಾರೆ.
’ಪ್ರಾಣಿಗಳು ನಮಗೆ ಮಾನವೀಯತೆ, ವಿಶ್ವಾಸ ಮತ್ತು ಬದುಕಿನ ಸಮತೋಲನವನ್ನು ಕಲಿಸುತ್ತವೆ. ಸೇವೆಯ ಮೂಲಕ ಪ್ರತಿಯೊಂದು ಪ್ರಾಣಿಯ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ವಂತಾರ ಮಾಡುತ್ತಿದೆ’ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.