ADVERTISEMENT

ಇರಾಕ್‌ಗೆ ಮರಳಿದ ಪ್ರಾಚೀನ ಮಣ್ಣಿನ ಟ್ಯಾಬ್ಲೆಟ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 14:35 IST
Last Updated 23 ಸೆಪ್ಟೆಂಬರ್ 2021, 14:35 IST
ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ (ಎಎಫ್‌ಪಿ ಚಿತ್ರ)
ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್(ಎಪಿ): 30 ವರ್ಷಗಳ ಹಿಂದೆ ಇರಾಕಿನ ವಸ್ತುಸಂಗ್ರಹಾಲಯದಿಂದ ಕಳ್ಳಸಾಗಣೆಯಾಗಿದ್ದ 3,500 ವರ್ಷಗಳ ಹಳೆಯ ಜೇಡಿಮಣ್ಣಿನ ಟ್ಯಾಬ್ಲೆಟ್ ಅಂತಿಮವಾಗಿ ಇರಾಕ್‌ಗೆ ಮರಳಿ ಬರುತ್ತಿದೆ.

ಅಸ್ಸಿರಿಯಾದ ರಾಜ ಅಸ್ಸೂರ್ ಬಾನಿಪಾಲ್ ಅವರ ಗ್ರಂಥಾಲಯದ ಅವಶೇಷಗಳಲ್ಲಿ 12-ಟ್ಯಾಬ್ಲೆಟ್ ಸಂಗ್ರಹದ ಭಾಗವಾಗಿ ಮಣ್ಣಿನ ಟ್ಯಾಬ್ಲೆಟ್ 1853ರಲ್ಲಿ ಪತ್ತೆಯಾಗಿತ್ತು. ಇದನ್ನು ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಎಂದು ಕರೆಯಲಾಗುತ್ತದೆ. 2003ರಲ್ಲಿ ಇದನ್ನು ಕಾನೂನುಬಾಹಿರವಾಗಿ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ನಂತರ ಅದು ಮಾರಾಟವಾಗಿ, ಅಂತಿಮವಾಗಿ ರಾಷ್ಟ್ರ ರಾಜಧಾನಿಯ ಬೈಬಲ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಹೋಮ್ಲ್ಯಾಂಡ್ ಸೆಕ್ಯುರಿಟಿ ತನಿಖಾಧಿಕಾರಿಗಳೊಂದಿಗೆ ಫೆಡರಲ್ ಏಜೆಂಟರು ಟ್ಯಾಬ್ಲೆಟ್ ಅನ್ನು ವಶಪಡಿಸಿಕೊಂಡಿದ್ದರು. ಇದರ ವಿಚಾರಣೆಗೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಫೆಡರಲ್ ಪ್ರಾಸಿಕ್ಯೂಟರ್‌ಗಳು ನಾಗರಿಕ ಜಪ್ತಿ ನ್ಯಾಯಾಲಯ ಪ್ರಾರಂಭಿಸಿದರು, ಇದು ಟ್ಯಾಬ್ಲೆಟ್‌ನ ವಾಪಸಾತಿಗೆ ಕಾರಣವಾಯಿತು. ಗುರುವಾರ ಮಧ್ಯಾಹ್ನ ಇರಾಕ್‌ನ ಅಧಿಕಾರಿಗಳನ್ನು ಒಳಗೊಂಡಿರುವ ಅಮೆರಿಕನ್ ಇಂಡಿಯನ್ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ ನಡೆದ ಸಮಾರಂಭದಲ್ಲಿ ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಅನ್ನು ಇರಾಕ್‌ಗೆ ಹಸ್ತಾಂತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.