
ವಿಶ್ವಸಂಸ್ಥೆ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ನಿಯಂತ್ರಿಸುವುದು ಕೇವಲ ವಿಶ್ವಸಂಸ್ಥೆಯ ಕೆಲಸವಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.
‘ಎಲ್ಲಾ ದೇಶಗಳು, ಸರ್ಕಾರಗಳು, ಖಾಸಗಿ ವಲಯಗಳು ಹಾಗೂ ನಾಗರಿಕ ಸಮಾಜದ ಭಾಗವಹಿಸುವಿಕೆಯೊಂದಿಗೆ ವಿಶ್ವಸಂಸ್ಥೆಯಲ್ಲಿ ವಾರ್ಷಿಕ ಜಾಗತಿಕ ಸಂವಾದವನ್ನು ಆಯೋಜಿಸಲಾಗುತ್ತಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.
ಕೃತಕ ಬುದ್ಧಿಮತ್ತೆ ಕುರಿತು ದಕ್ಷಿಣ ಜಗತ್ತಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ‘ಇಂಡಿಯಾ ಎ.ಐ ಇಂಪ್ಯಾಕ್ಟ್’ ಶೃಂಗಸಭೆಯಲ್ಲಿ ಭಾಗವಹಿಸಲು ಗುಟೆರಸ್ ಅವರು ಶೀಘ್ರ ಭಾರತಕ್ಕೆ ಬರಲಿದ್ದಾರೆ.
ಎ.ಐ ಕುರಿತು ಜಾಗತಿಕ ಸಹಕಾರವನ್ನು ಗಮನದಲ್ಲಿರಿಸಿಕೊಂಡು ವಿಶ್ವಸಂಸ್ಥೆಯು ಪ್ರಯತ್ನಗಳನ್ನು ವಿವರಿಸಿದರು.
ಎ.ಐಗೆ ಸಂಬಂಧಿಸಿ ವಿಶ್ವಸಂಸ್ಥೆಯು ವಿವಿಧ ದೇಶಗಳ 40 ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.