ADVERTISEMENT

ಅಜರ್‌ಬೈಜಾನ್‌ ದಾಳಿಯಿಂದ 49 ಸೈನಿಕರ ಸಾವು: ಅರ್ಮೇನಿಯಾ ಪ್ರಧಾನಿ

ಏಜೆನ್ಸೀಸ್
Published 13 ಸೆಪ್ಟೆಂಬರ್ 2022, 12:41 IST
Last Updated 13 ಸೆಪ್ಟೆಂಬರ್ 2022, 12:41 IST
ಅರ್ಮೇನಿಯ ಪ್ರಧಾನಿ ನಿಕೋಲ್ ಪಶಿನ್ಯಾನ್
ಅರ್ಮೇನಿಯ ಪ್ರಧಾನಿ ನಿಕೋಲ್ ಪಶಿನ್ಯಾನ್   

ಯೆರೆವಾನ್: ‘ಅಜರ್‌ಬೈಜಾನ್‌ ಪಡೆಗಳು ಅರ್ಮೇನಿಯಾದ ಭೂಪ್ರದೇಶದ ಮೇಲೆ ದೊಡ್ಡ ಪ್ರಮಾಣದ ಶೆಲ್‌ ದಾಳಿ ನಡೆಸಿದ್ದು, ಇದರಿಂದ ಕನಿಷ್ಠ 49 ಸೈನಿಕರು ಸಾವಿಗೀಡಾಗಿದ್ದಾರೆ. ಈ ಘಟನೆ ಹಗೆತನ ಹೆಚ್ಚಿಸುವ ಆತಂಕ ಮೂಡಿಸಿದೆ’ ಎಂದು ಅಲ್ಲಿನಪ್ರಧಾನಿನಿಕೋಲ್ ಪಶಿನ್ಯಾನ್ ಮಂಗಳವಾರ ಬೆಳಿಗ್ಗೆ ಸಂಸತ್ತಿನಲ್ಲಿ ಹೇಳಿದರು.

ಅಜರ್‌ಬೈಜಾನ್‌ ಮತ್ತು ಅರ್ಮೇನಿಯಾ ದೇಶಗಳು ಕಳೆದ 10 ವರ್ಷಗಳಿಂದ ಅಜರ್‌ಬೈಜಾನ್ ಭಾಗವಾಗಿರುವ ನಾಗೋರ್ನೊ-ಕರಾಬಖ್ ಪ್ರದೇಶಕ್ಕಾಗಿ ಸಂಘರ್ಷ ನಡೆಸುತ್ತಿವೆ. ಈ ಪ್ರದೇಶ 1994ರಲ್ಲಿ ಪ್ರತ್ಯೇಕತಾವಾದಿ ಯುದ್ಧವು ಕೊನೆಗೊಂಡ ನಂತರದಿಂದ ಅರ್ಮೇನಿಯಾ ಸೈನ್ಯದ ನಿಯಂತ್ರಣದಲ್ಲಿದೆ. ಈ ಪ್ರದೇಶಕ್ಕಾಗಿ 2020ರಲ್ಲಿ ಆರು ವಾರಗಳ ಕಾಲ ನಡೆದ ಯುದ್ಧದಲ್ಲಿ 6,600ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ರಷ್ಯಾ ಮಧ್ಯಸ್ಥಿಕೆಯಿಂದಾಗಿ ಶಾಂತಿ ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತ್ತು.

ಒಪ್ಪಂದದ ಅಡಿಯಲ್ಲಿ ಶಾಂತಿಪಾಲನೆಗಾಗಿ ರಷ್ಯಾ ನಿಯೋಜಿಸಿದ್ದ 2,000 ಪಡೆಗಳನ್ನು ಮಂಗಳವಾರ ಬೆಳಿಗ್ಗೆ ಕದನ ವಿರಾಮ ಉಲ್ಲಂಘಿಸುವ ಕಾರಣಕ್ಕೆ ತ್ವರಿತವಾಗಿ ಸ್ಥಳಾಂತರಿಸಲಾಯಿತು.

ADVERTISEMENT

ಅರ್ಮೇನಿಯಾದ ಹಲವು ಭಾಗಗಳಲ್ಲಿ ಅಜರ್‌ಬೈಜಾನ್‌ ಪಡೆಗಳು ಶೆಲ್‌ ದಾಳಿ ಮತ್ತು ಡ್ರೋನ್ ದಾಳಿ ನಡೆಸಿವೆ ಎಂದುಅರ್ಮೇನಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.