ADVERTISEMENT

ಬಾಂಗ್ಲಾದೇಶ: ದುಷ್ಕರ್ಮಿಗಳಿಂದ ಹಿಂದೂಗಳ 66 ಮನೆಗಳ ಧ್ವಂಸ, 20 ಮನೆಗಳಿಗೆ ಬೆಂಕಿ

ಪಿಟಿಐ
Published 18 ಅಕ್ಟೋಬರ್ 2021, 14:45 IST
Last Updated 18 ಅಕ್ಟೋಬರ್ 2021, 14:45 IST
ಪ್ರಾತಿನಿಧಿಕ ಚಿತ್ರ –ಎಎಫ್‌ಪಿ ಚಿತ್ರ
ಪ್ರಾತಿನಿಧಿಕ ಚಿತ್ರ –ಎಎಫ್‌ಪಿ ಚಿತ್ರ   

ಢಾಕಾ, ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಮುಂದುವರಿದಿದೆ. ಗುಂಪೊಂದು ಹಿಂದೂಗಳಿಗೆ ಸೇರಿದ 66 ಮನೆಗಳನ್ನು ಧ್ವಂಸ ಮಾಡಿದ್ದು, ಕನಿಷ್ಠ 20 ಮನೆಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕಳೆದ ವಾರ ದುರ್ಗಾ ಪೂಜೆ ವೇಳೆ, ಪೆಂಡಾಲ್‌ಗಳನ್ನು ಧ್ವಂಸ ಮಾಡಿದ್ದ ಗುಂಪು, ದೇವಸ್ಥಾನದ ಮೇಲೂ ದಾಳಿ ನಡೆಸಿತ್ತು. ಈ ಘಟನೆಗಳನ್ನು ಖಂಡಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದರು.

‘ಈ ನಡುವೆ, ಸಾಮಾಜಿಕ ಮಾಧ್ಯಮಗಳ ಮೂಲಕ ಧರ್ಮ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ರಂಗಪುರ ಜಿಲ್ಲೆಯ ಗ್ರಾಮವೊಂದರಲ್ಲಿ 100ಕ್ಕೂ ಅಧಿಕ ಜನರಿದ್ದ ಗುಂಪು ಭಾನುವಾರ ರಾತ್ರಿ ದಾಳಿ ನಡೆಸಿದೆ. 66 ಮನೆಗಳನ್ನು ಧ್ವಂಸ ಮಾಡಿ, 20 ಮನೆಗಳಿಗೆ ಬೆಂಕಿ ಹಚ್ಚಿದೆ’ ಎಂದು ‘ಬಿಡಿನ್ಯೂಸ್24ಡಾಟ್‌ಕಾಂ’ ವರದಿ ಮಾಡಿದೆ.

ADVERTISEMENT

‘ಅಗ್ನಿ ಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಪರಿಸ್ಥಿತಿ ಈಗ ಹತೋಟಿಯಲ್ಲಿದೆ’ ಎಂದು ಎಎಸ್‌ಪಿ ಮೊಹಮ್ಮದ್‌ ಕಮ್ರುಜ್ಜಮಾನ್‌ ತಿಳಿಸಿದ್ದಾರೆ.

‘ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ. 52 ಜನ ಶಂಕಿತರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗಾಗಿ ಜಾಲ ಬೀಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.