ADVERTISEMENT

ಇಸ್ರೇಲ್‌: ಮತ ಎಣಿಕೆ ಪೂರ್ಣ

ರಾಯಿಟರ್ಸ್
Published 26 ಮಾರ್ಚ್ 2021, 18:31 IST
Last Updated 26 ಮಾರ್ಚ್ 2021, 18:31 IST

ಟೆಲ್‌ ಅವಿವ್‌: ಇಸ್ರೇಲ್‌ನಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ಚುನಾವಣೆಯ ಮತಗಳ ಎಣಿಕೆ ಮುಗಿದಿದ್ದು, ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅಥವಾ ಅವರ ವಿರೋಧಿ ಬಣಕ್ಕೆ ಸರಳ ಬಹುಮತ ಲಭಿಸಿಲ್ಲ.

ಇಸ್ರೇಲ್‌ನ ಕೇಂದ್ರ ಚುನಾವಣಾ ಸಮಿತಿಯು ಪ್ರಕಟಿಸಿದ ಅಂತಿಮ ಫಲಿತಾಂಶದ ಪ್ರಕಾರ, ನೆತನ್ಯಾಹು ನೇತೃತ್ವದ ಮೈತ್ರಿಕೂಟ 52 ಸ್ಥಾನಗಳನ್ನು, ಅವರ ವಿರೋಧಿ ಬಣ 57 ಸ್ಥಾನಗಳನ್ನು ಗೆದ್ದಿದೆ. ಸಂಸತ್ತಿನ ಒಟ್ಟು ಸದಸ್ಯ ಬಲ 120 ಆಗಿದ್ದು, ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಸರಳ ಬಹುಮತಕ್ಕೆ ಪಡೆಯಬೇಕಿದೆ.

ಇಸ್ರೇಲ್‌ನಲ್ಲಿ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಚುನಾವಣೆ ನಡೆದಿದ್ದು, ಅನಿಶ್ಚಿತ ಫಲಿತಾಂಶವೇ ಬಂದಿತ್ತು. ನಾಲ್ಕು ಚುನಾವಣೆಗಳಲ್ಲಿ ನೆತನ್ಯಾಹು ಅವರು ಸರಳ ಬಹುಮತ ಪಡೆಯಲು ಯಶಸ್ವಿಯಾಗಿಲ್ಲ.

ADVERTISEMENT

ಅವರು ಸ್ವತಃ ಸ್ಪರ್ಧೆಯಿಂದ ಹಿಂದೆ ಸರಿದು ಹೊಸ ಅಧ್ಯಾಯ ಆರಂಭವಾಗಲು ಅವಕಾಶ ಕಲ್ಪಿಸಬೇಕು ಎಂಬ ಮಾತು ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.