ADVERTISEMENT

ಕ್ವಾಲಾಲಂಪುರ | ಇಂದಿನಿಂದ ಆಸಿಯಾನ್‌ ಶೃಂಗಸಭೆ: ಡೊನಾಲ್ಡ್‌ ಟ್ರಂಪ್‌ ಭಾಗಿ

ಏಜೆನ್ಸೀಸ್
Published 25 ಅಕ್ಟೋಬರ್ 2025, 19:08 IST
Last Updated 25 ಅಕ್ಟೋಬರ್ 2025, 19:08 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ಕ್ವಾಲಾಲಂಪುರ (ಮಲೇಷ್ಯಾ): ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್‌) ಶೃಂಗಸಭೆ ಇದೇ 26ರಿಂದ ಆರಂಭವಾಗಲಿದ್ದು, 28ರ ವರೆಗೆ ನಡೆಯಲಿದೆ.

11ನೇ ಸದಸ್ಯರಾಷ್ಟ್ರವಾಗಿ ಪೂರ್ವ ತಿಮೋರ್, ಆಸಿಯಾನ್ ಸಂಘಟನೆಗೆ ಸೇರ್ಪಡೆಯಾಗಲಿದೆ. ಅಲ್ಲದೇ, ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಗೊಂಡ ನಂತರ ಇದೇ ಮೊದಲ ಬಾರಿಗೆ ಏಷ್ಯಾಕ್ಕೆ ಭೇಟಿ ನೀಡುತ್ತಿರುವ ಡೊನಾಲ್ಡ್‌ ಟ್ರಂಪ್‌ ಕೂಡ ಈ ಶೃಂಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶೃಂಗಸಭೆಗೆ ಪೂರ್ವಭಾವಿಯಾಗಿ, ಆಸಿಯಾನ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಶನಿವಾರ ಸಭೆ ನಡೆಸಿದರು.

ADVERTISEMENT

ಸದಸ್ಯ ರಾಷ್ಟ್ರಗಳಾದ ಭಾರತ, ಚೀನಾ, ಜಪಾನ್‌, ಆಸ್ಟ್ರೇಲಿಯಾ, ರಷ್ಯಾ, ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಪ್ರಾದೇಶಿಕ ಭದ್ರತೆ, ಆರ್ಥಿಕ ಪುನಶ್ಚೇತನ ಹಾಗೂ ಸಾಗರ ಗಡಿಗೆ ಸಂಬಂಧಿಸಿದ ವ್ಯಾಜ್ಯಗಳ ಕುರಿತು ಈ ದೇಶಗಳ ನಾಯಕರು ಚರ್ಚೆ ನಡೆಸುವರು.

ಟ್ರಂಪ್ ಪ್ರವಾಸ:
ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಜೊತೆ ಮಾತುಕತೆ ನಡೆಸುವುದು ಸೇರಿ ವಿವಿಧ ದೇಶಗಳ ನಾಯಕರ ಭೇಟಿ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಶನಿವಾರ ಏಷ್ಯಾ ಪ್ರವಾಸ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.