ADVERTISEMENT

ಬಾಲ್ಟಿಮೋರ್ ಸೇತುವೆ ಅವಘಡ: ನಾಲ್ವರು ನಾಪತ್ತೆ, ಅವಶೇಷ ತೆರವು ಆರಂಭ

ಏಜೆನ್ಸೀಸ್
Published 30 ಮಾರ್ಚ್ 2024, 15:59 IST
Last Updated 30 ಮಾರ್ಚ್ 2024, 15:59 IST
ಸರಕುಸಾಗಣೆ ಹಡಗು ಡಿಕ್ಕಿ ಹೊಡೆದು ಬಾಲ್ಟಿಮೋರ್‌ನ ಪಟಾಪ್ಸ್ಕೊ ನದಿಗೆ ಕುಸಿದಿರುವ ಸೇತುವೆ –ಎಎಫ್‌ಪಿ ಸಂಗ್ರಹ ಚಿತ್ರ
ಸರಕುಸಾಗಣೆ ಹಡಗು ಡಿಕ್ಕಿ ಹೊಡೆದು ಬಾಲ್ಟಿಮೋರ್‌ನ ಪಟಾಪ್ಸ್ಕೊ ನದಿಗೆ ಕುಸಿದಿರುವ ಸೇತುವೆ –ಎಎಫ್‌ಪಿ ಸಂಗ್ರಹ ಚಿತ್ರ   

ಬಾಲ್ಟಿಮೋರ್, ಅಮೆರಿಕ: ಸರಕು ಸಾಗಣೆ ಹಡಗು ಡಿಕ್ಕಿಯಾಗಿ ‘ಫ್ರಾನ್ಸಿಸ್‌ ಸ್ಕಾಟ್‌ ಕೀ’ ಸೇತುವೆ ಕುಸಿದಿದ್ದ ಸಂದರ್ಭದಲ್ಲಿ ಪಟಾಪ್ಸ್ಕೊ ನದಿಗೆ ಬಿದ್ದಿದ್ದ ನಾಲ್ವರ ಪತ್ತೆಗೆ ಶೋಧ ಮುಂದುವರಿದಿದೆ. ಈ ನಾಲ್ವರು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ನದಿಗೆ ಬಿದ್ದಿದ್ದ 2.6 ಕಿ.ಮೀ ಉದ್ದದ ಸೇತುವೆಯ ಅವಶೇಷಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬೃಹತ್ ಅವಶೇಷ ತೆರವು ಸವಾಲಿನ ಕೆಲಸವಾಗಿದೆ ಎಂದು ಅಮೆರಿಕ ಕಡಲು ಕಾವಲು ಪಡೆಯ ಶಾನೋನ್‌ ಗಿಲ್‌ರೀತ್‌ ಶುಕ್ರವಾರ ತಿಳಿಸಿದ್ದಾರೆ.

ಸುಮಾರು 1 ಸಾವಿರ ಟನ್‌ ಭಾರ ಎತ್ತುವ ಸಾಮರ್ಥ್ಯದ ಬೃಹತ್‌ ಕ್ರೇನ್‌ ಸೇರಿದಂತೆ ಏಳು ಕ್ರೇನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 10 ರಕ್ಷಣಾ ದೋಣಿಗಳು, ಒಂಭತ್ತು ಬಾರ್ಜ್‌ಗಳು, ಕರಾವಳಿ ಕಾವಲು ಪಡೆಯ ಐದು ದೋಣೀಗಳನ್ನು ತೆರವು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ADVERTISEMENT

ನದಿಗೆ ಕುಸಿದು ಬಿದ್ದಿರುವ ಸೇತುವೆ ಅವಶೇಷವು ಸುಮಾರು 4,000 ಟನ್‌ ತೂಕದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.