ADVERTISEMENT

ಮಡಗಾಸ್ಕರ್ ಕ್ರೀಡಾಂಗಣದಲ್ಲಿ ಕಾಲ್ತುಳಿತ: 12 ಮಂದಿ ಸಾವು

ಎಎಫ್‌ಪಿ
Published 25 ಆಗಸ್ಟ್ 2023, 19:59 IST
Last Updated 25 ಆಗಸ್ಟ್ 2023, 19:59 IST
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ   

ಅಂಟಾನಾನರಿವೊ: ಮಗಾಸ್ಕರ್‌ನ ರಾಜಧಾನಿ ಅಂಟಾನಾನರಿವೊದ ಕ್ರೀಡಾಂಗಣದಲ್ಲಿ ಶುಕ್ರವಾರ ಕಿಕ್ಕಿರಿದು ಸೇರಿದ್ದ ಜನಸಂದಣಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಜನರು ಮೃತಪಟ್ಟಿದ್ದಾರೆ ಎಂದು ದೇಶದ ಪ್ರಧಾನಿ ಕ್ರಿಶ್ಚಿಯನ್ ಸೇ ತಿಳಿಸಿದ್ದಾರೆ.

ಘಟನೆಯಲ್ಲಿ ಸುಮಾರು 80 ಮಂದಿ ಗಾಯಗೊಂಡಿದ್ದಾರೆ ಎಂದು ಆಂಟನಾನರಿವೋ ಆಸ್ಪತ್ರೆಯಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಇಂಡಿಯನ್ ಓಷನ್ ಐಲ್ಯಾಂಡ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 50 ಸಾವಿರ ಪ್ರೇಕ್ಷಕರು ಆಗಮಿಸಿದ್ದ ಬರಿಯಾ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ  ಕಾಲ್ತುಳಿತ ಸಂಭವಿಸಿದೆ.

ADVERTISEMENT

‘ಜನರ ತಳ್ಳಾಟದಿಂದ ಪ್ರವೇಶದ್ವಾರದಲ್ಲಿ ಸಾವು–ನೋವು ಸಂಭವಿಸಿವೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಡಗಾಸ್ಕರ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.