ADVERTISEMENT

ಆದಿವಾಸಿ ಜನರಿಗೂ ಸಾಂವಿಧಾನಿಕ ಹಕ್ಕು: ಶೀಘ್ರ ಜನಮತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:28 IST
Last Updated 10 ಜುಲೈ 2019, 19:28 IST

ಸಿಡ್ನಿ: ಆದಿವಾಸಿ ಜನರನ್ನು ಸಂವಿಧಾನದಡಿ ತರುವ ನಿಟ್ಟಿನಲ್ಲಿ ಮೂರು ವರ್ಷದೊಳಗಾಗಿ ಐತಿಹಾಸಿಕ ಜನಮತ ನಡೆಸುವುದಾಗಿ ಆಸ್ಟ್ರೇಲಿಯಾದ ಆಂತರಿಕ ವ್ಯವಹಾರಗಳ ಸಚಿವ ಕೆನ್‌ ವ್ಯಾಟ್‌ ತಿಳಿಸಿದ್ದಾರೆ.

ಬ್ರಿಟಿಷ್‌ ವಸಾಹತಿಗೆ ಸಾವಿರಾರು ವರ್ಷದ ಮೊದಲಿನಿಂದಲೇ ಆದಿವಾಸಿಗಳು ಹಾಗೂ ಟೋರಿಸ್‌ ಸ್ಟ್ರೈಟ್‌ ದ್ವೀಪದ ಜನರು ಈ ಭೂಮಿಯಲ್ಲಿ ವಾಸಿಸುತ್ತಿದ್ದರು. ಪ್ರಸ್ತುತ ಇಲ್ಲಿರುವ ಜನಸಂಖ್ಯೆಯ ಶೇ 3 ರಷ್ಟು ಜನ ಈ ಆದಿವಾಸಿಗಳಾಗಿದ್ದಾರೆ. ಆದರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರನ್ನು ಸಂವಿಧಾನದಡಿ ತರುವ ಅಭಿಯಾನ ಸಾಕಷ್ಟು ಪರ– ವಿರೋಧ ಚರ್ಚೆಗಳಿಗೆ ಒಳಗಾಗಿತ್ತು.

ಸರ್ಕಾರ ಆದಿವಾಸಿ ಜನರ ಆರೋಗ್ಯ, ಶಿಕ್ಷಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಪ್ರಯೋಜನವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲಿಸಾಂವಿಧಾನಿಕ ಜನಮತದಲ್ಲಿ ಮತ ಚಲಾಯಿಸುವುದು ಕಡ್ಡಾಯವಾಗಿದ್ದು, 1901ರಿಂದ ಇಲ್ಲಿಯವರೆಗೂ 44 ಪ್ರಸ್ತಾವನೆಗಳ ಪೈಕಿ ಕೇವಲ 8 ಪ್ರಸ್ತಾವಗಳು ಅಂಗೀಕೃತವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.