ADVERTISEMENT

ಕೋವಿಡ್‌: ಆಸ್ಟ್ರೇಲಿಯಾದ ಎರಡು ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆ

ಏಜೆನ್ಸೀಸ್
Published 19 ಆಗಸ್ಟ್ 2021, 6:08 IST
Last Updated 19 ಆಗಸ್ಟ್ 2021, 6:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ಯಾನ್‌ಬೆರಾ: ಆಸ್ಟ್ರೇಲಿಯಾದ ಅತಿ ಹೆಚ್ಚು ಜನಸಂಖ್ಯೆಯುಳ್ಳ ಎರಡು ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ನ್ಯೂಸೌತ್ ವೇಲ್ಸ್‌ನಲ್ಲಿ 681 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬಹುತೇಕ ಪ್ರಕರಣಗಳು ಸಿಡ್ನಿಯಲ್ಲಿ ದೃಢಪಟ್ಟಿವೆ. ಈ ರಾಜ್ಯದಲ್ಲಿ ಬುಧವಾರ 633 ಪ್ರಕರಣಗಳು ವರದಿಯಾಗಿತ್ತು.

ನೆರೆರಾಜ್ಯ ವಿಕ್ಟೋರಿಯಾದ ರಾಜಧಾನಿ ಮೆಲ್ಬರ್ನ್‌ನಲ್ಲಿ 57 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ವರ್ಷ ಸೆಪ್ಟೆಂಬರ್‌ ಬಳಿಕ ಇಲ್ಲಿ ವರದಿಯಾದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ.

ADVERTISEMENT

ಆಸ್ಟ್ರೇಲಿಯಾದಲ್ಲಿ ಡೆಲ್ಟಾ ರೂಪಾಂತರ ತಳಿ ಹರಡುವುದಕ್ಕಿಂತ ಮೊದಲು ದೇಶವು ಕೊರೊನಾ ಪಿಡುಗನ್ನು ಸಫಲವಾಗಿ ನಿಯಂತ್ರಿಸಿತ್ತು. ಈಗಲೂ ಅದೇ ಮಾರ್ಗವನ್ನು ಅನುಸರಿಸಲು ಮುಂದಾಗಿರುವ ಅಧಿಕಾರಿಗಳು ಮೆಲ್ಬರ್ನ್‌ ನಗರ ಮತ್ತು ನ್ಯೂಸೌತ್ ವೇಲ್ಸ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.