ADVERTISEMENT

ಇಡಾ ಚಂಡಮಾರುತದಿಂದ ಅಮೆರಿಕದ ನ್ಯೂಜೆರ್ಸಿಯಲ್ಲಿ ಪ್ರವಾಹ: ಭಾರತದ ಇಬ್ಬರು ನಾಪತ್ತೆ

ಡ್ರೋನ್‌ ಮೂಲಕ ಶೋಧ ಕಾರ್ಯಾಚರಣೆ

ಪಿಟಿಐ
Published 6 ಸೆಪ್ಟೆಂಬರ್ 2021, 9:59 IST
Last Updated 6 ಸೆಪ್ಟೆಂಬರ್ 2021, 9:59 IST
ನ್ಯೂಜೆರ್ಸಿಯಲ್ಲಿ ಪ್ರವಾಹ ಪೀಡಿತ ಪ್ರದೇಶದ ಉಪಗ್ರಹ ದೃಶ್ಯ.      ರಾಯಿಟರ್ಸ್‌ ಚಿತ್ರ
ನ್ಯೂಜೆರ್ಸಿಯಲ್ಲಿ ಪ್ರವಾಹ ಪೀಡಿತ ಪ್ರದೇಶದ ಉಪಗ್ರಹ ದೃಶ್ಯ.      ರಾಯಿಟರ್ಸ್‌ ಚಿತ್ರ   

ನ್ಯೂಯಾರ್ಕ್: ಅಮೆರಿಕದ ನ್ಯೂಜೆರ್ಸಿಯಲ್ಲಿ ಇಡಾ ಚಂಡಮಾರುತದಿಂದ ಸಂಭವಿಸಿದ ಭಾರಿ ಪ್ರವಾಹದಲ್ಲಿ ಭಾರತೀಯ ಸಂಜಾತರಾದ ಇಬ್ಬರು ನಾಪತ್ತೆಯಾಗಿದ್ದಾರೆ. ಇವರ ಪತ್ತೆಗೆ ಡ್ರೋನ್‌ ಮತ್ತು ಬೋಟ್‌ಗಳ ಮೂಲಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನಿಧಿ ರಾಣಾ (18) ಮತ್ತು ಆಯುಷ್‌ ರಾಣಾ (21) ನಾಪತ್ತೆಯಾದವರು. ಆಯುಷ್‌ ಅವರ ಕಾರು ಬುಧವಾರ ಪ್ರವಾಹದಲ್ಲಿ ಸಿಲುಕಿಕೊಂಡಿತ್ತು. ಅವರು ಕಾಣಿಸಿಕೊಂಡಿದ್ದು ಅದೇ ಕೊನೆ ದಿನ ಎಂದು ‘ನಾರ್ಥಜೆರ್ಸಿ.ಕಾಮ್‌’ ವರದಿ ಮಾಡಿದೆ.

‘ಎರಡು ಬೋಟ್‌ಗಳು ಮತ್ತು ಮೂರು ಡ್ರೋನ್‌ಗಳನ್ನು ಶೋಧ ಕಾರ್ಯಾಚರಣೆಗೆ ಬಳಸಲಾಗಿದೆ. ರಕ್ಷಣಾ ತಂಡಗಳು ಮೋರಿಯಲ್ಲೂ ಶೋಧ ನಡೆಸಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಚಂಡಮಾರುತದಿಂದಾಗಿ ಇದುವರೆಗೆ 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಭಾರತ ಸಂಜಾತರಾದ ಮಾಲತಿ ಕಾಂಚೆ (45) ಹಾಗೂ ಧನುಷ್‌ ರೆಡ್ಡಿ (31) ಎಂದು ಇತ್ತೀಚೆಗೆ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.