ADVERTISEMENT

ಸಾಲ, ಇಂಧನ ತೆರಿಗೆ ಕಡಿತ ಪ್ರಕಟಿಸಿದ ಬ್ರಿಟನ್‌

ಏಜೆನ್ಸೀಸ್
Published 17 ಅಕ್ಟೋಬರ್ 2022, 19:31 IST
Last Updated 17 ಅಕ್ಟೋಬರ್ 2022, 19:31 IST
ಜೆರೆಮಿ ಹಂಟ್‌
ಜೆರೆಮಿ ಹಂಟ್‌   

ಲಂಡನ್‌:ಹಣಕಾಸು ಮಾರುಕಟ್ಟೆಯಲ್ಲಿ ತಲೆದೋರಿರುವ ಕೋಲಾಹಲವನ್ನು ತಹಬದಿಗೆ ತರಲುಸಾಲ ಮತ್ತು ಇಂಧನ ತೆರಿಗೆ ಕಡಿತವನ್ನು ಬ್ರಿಟನ್‌ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್‌ ಅವರು ಸೋಮವಾರ ಪ್ರಕಟಿಸಿದ್ದಾರೆ.

ಲಿಜ್‌ ಟ್ರಸ್‌ ಅವರು ಪ್ರಧಾನಿಯಾದ ಮೇಲೆ, ಸರ್ಕಾರ ತೆಗೆದುಕೊಂಡ ಮತ್ತೊಂದು ಪ್ರಮುಖ ನಿರ್ಧಾರ ಇದಾಗಿದೆ.

ಸಾರ್ವಜನಿಕ ಹಣಕಾಸುಗಳಲ್ಲಿ ಸರ್ಕಾರವು 60 ಬಿಲಿಯನ್ ಪೌಂಡ್‌ ಕಳೆದುಕೊಂಡಿದೆ ಎಂದು ಆರ್ಥಿಕತಜ್ಞರು ಅಂದಾಜಿಸಿದ ನಂತರ, ತೆರಿಗೆ ಬದಲಾವಣೆಯಿಂದ ವರ್ಷಕ್ಕೆ ಸುಮಾರು 32 ಬಿಲಿಯನ್ ಪೌಂಡ್‌ ಸಂಗ್ರಹ ಏರಿಕೆಯಾಗಲಿದೆ ಎಂದುಹಂಟ್ ಅಂದಾಜು ಮಾಡಿದ್ದಾರೆ.

ADVERTISEMENT

ವೆಚ್ಚವನ್ನು ಕಡಿತ ಮಾಡುವ ಬಗ್ಗೆಯೂ ಎಚ್ಚರಿಸಿದ ಅವರು, ಯಾವುದೇ ಸರ್ಕಾರವು ಸಾರ್ವಜನಿಕ ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ನಾವು ತೆಗೆದುಕೊಂಡಿರುವ ಸುಧಾರಣಾ ಕ್ರಮವು ಸಾರ್ವಜನಿಕ ಹಣಕಾಸಿನ ಸುಸ್ಥಿತಿಯ ಬಗ್ಗೆ ಖಾತರಿ ನೀಡುತ್ತದೆ ಎಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.