ಮಾಸ್ಕೊ: ‘ರಷ್ಯಾವು ಉದ್ದೇಶಪೂರ್ವಕವಾಗಿ ದಾಳಿ ಮಾಡಿಲ್ಲ. ಆದರೆ, ಘಟನೆ ನಡೆದು ಹಲವು ದಿನಗಳವರೆಗೆ ಮೌನ ವಹಿಸಿದ್ದು ಮಾತ್ರ ಸರಿಯಲ್ಲ’ ಎಂದು ಅಜರ್‌ಬೈಜಾನ್ ಅಧ್ಯಕ್ಷ ಇಲಹಂ ಅಲಿಯವ್ ಭಾನುವಾರ ಹೇಳಿದರು.
ಅಜರ್‌ಬೈಜಾನ್‌ನ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಇಲಹಂ ಅಲಿಯವ್, ‘ರಷ್ಯಾದ ಕಾರಣದಿಂದಲೇ ವಿಮಾನ ಪತನವಾಗಿದೆಯಾದರೂ ಅದು ಉದ್ದೇಶಪೂರ್ವಕ ದಾಳಿಯಾಗಿರಲಿಲ್ಲ. ಉಕ್ರೇನ್ ನಡೆಸಿದ ದಾಳಿಗೆ ರಷ್ಯಾವು ಪ್ರತಿದಾಳಿ ನಡೆಸುವ ವೇಳೆ ಈ ದುರ್ಘಟನೆ ನಡೆದಿದೆ. ಇದು ಯಾರ ನಿಯಂತ್ರಣದಲ್ಲಿಯೂ ಇಲ್ಲವಾಗಿತ್ತು’ ಎಂದರು.
ಅಜರ್‌ಬೈಜಾನ್‌ನ ವಿಮಾನವೊಂದು ಕಜಕಿಸ್ತಾನದಲ್ಲಿ ಬುಧವಾರ ಪತನಗೊಂಡು 67 ಪ್ರಯಾಣಿಕರ ಪೈಕಿ 38 ಮಂದಿ ಮೃತಪಟ್ಟಿದ್ದರು. ಈ ಘಟನೆ ಕುರಿತು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರು ಕ್ಷಮೆ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.