
ಬಾಂಗ್ಲಾ ಧ್ವಜ
ಢಾಕಾ (ಪಿಟಿಐ): ‘ಬಾಂಗ್ಲಾದೇಶದಿಂದ ತನ್ನ ರಾಯಭಾರಿಗಳ ಕುಟುಂಬದವರನ್ನು ಭಾರತ ಮರಳಿ ಕರೆಸಿಕೊಳ್ಳುತ್ತಿರುವುದಕ್ಕೆ ಯಾವುದೇ ಕಾರಣವಿಲ್ಲ.ರಾಯಭಾರ ಅಧಿಕಾರಿಗಳಿಗೆ ಅಥವಾ ಅವರ ಕುಟುಂಬಸ್ಥರಿಗೆ ಇಲ್ಲಿ ಭದ್ರತಾ ಬೆದರಿಕೆಯೇನೂ ಇಲ್ಲ’ ಎಂದು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ತೋಹಿದ್ ಹುಸೈನ್ ಬುಧವಾರ ಹೇಳಿದ್ದಾರೆ.
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ಹೆಚ್ಚುತ್ತಿರುವ ತೀವ್ರಗಾಮಿ ಚಟುವಟಿಕೆಗಳನ್ನು ಗಮನಿಸಿ, ಭದ್ರತಾ ಹಿತದೃಷ್ಟಿಯಿಂದ ತನ್ನ ರಾಯಭಾರ ಅಧಿಕಾರಿಗಳ ಕುಟುಂಬಗಳನ್ನು ಮರಳಿ ಕರೆಸಿಕೊಳ್ಳಲು ಭಾರತ ಕಳೆದವಾರ ನಿರ್ಧರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹುಸೈನ್, ‘ಅಧಿಕಾರಿಗಳು ಅಥವಾ ಕುಟುಂಬಗಳಿಗೆ ಬೆದರಿಕೆ ಒಡ್ಡುವಂತಹ ಯಾವುದೇ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಆದಾಗ್ಯೂ, ಕುಟುಂಬಗಳನ್ನು ಮರಳಿ ಕರೆಸಿಕೊಳ್ಳುವುದು ಭಾರತದ ಆಂತರಿಕ ವಿಚಾರವಾಗಿದೆ. ಈ ಮೂಲಕ ಭಾರತ ಯಾವುದೋ ಸಂದೇಶ ನೀಡಲು ಬಯಸಿರಬಹುದು. ಆದರೆ, ನಮಗೆ ಯಾವ ಸ್ಪಷ್ಟ ಕಾರಣಗಳೂ ಕಂಡುಬಂದಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.