ADVERTISEMENT

ಬಾಂಗ್ಲಾದೇಶ: ಹಲ್ಲೆಯಿಂದ ಪಾರಾಗಲು ನಾಲೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಪಿಟಿಐ
Published 7 ಜನವರಿ 2026, 16:20 IST
Last Updated 7 ಜನವರಿ 2026, 16:20 IST
<div class="paragraphs"><p>ಬಾಂಗ್ಲಾದೇಶ ಧ್ವಜ</p></div>

ಬಾಂಗ್ಲಾದೇಶ ಧ್ವಜ

   

– ಪಿಟಿಐ ಚಿತ್ರ

ಢಾಕಾ: ತನ್ನನ್ನು ಬೆನ್ನಟ್ಟಿದ್ದ ಗುಂಪಿನಿಂದ ಪಾರಾಗಲು ನಾಲೆಗೆ ಹಾರಿದ್ದ ಹಿಂದೂ ಯುವಕನೊಬ್ಬ, ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಾಂಗ್ಲಾದೇಶದ ನಾವ್‌ಗಾಂವ್‌ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ADVERTISEMENT

‘ಮೃತ ಯುವಕನನ್ನು ಮಿಥುನ್‌ ಸರ್ಕಾರ್(25) ಎಂಬುದಾಗಿ ಗುರುತಿಸಲಾಗಿದೆ’ ಎಂದು ಬಾಂಗ್ಲಾದೇಶ ಹಿಂದೂ, ಬುದ್ಧಿಸ್ಟ್, ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್(ಬಿಎಚ್‌ಬಿಸಿಯುಸಿ) ವಕ್ತಾರ ಕಾಜೋಲ್ ದೇವನಾಥ್‌ ತಿಳಿಸಿದ್ದಾರೆ.

‘ಸರ್ಕಾರ್‌ ವಿರುದ್ಧ ಕಳ್ಳತನ ಆರೋಪ ಮಾಡಿದ್ದ ಗುಂಪೊಂದು, ಆತನನ್ನು ಬೆನ್ನಟ್ಟಿದೆ. ಗುಂಪಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ ನಾಲೆಗೆ ಹಾರಿ, ಮೃತಪಟ್ಟಿದ್ದಾನೆ’ ಎಂದೂ ದೇವನಾಥ್‌ ಹೇಳಿದ್ದಾರೆ.

‘ದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಆತಂಕ ಮೂಡಿದೆ. ಇಂತಹ ಘಟನೆಗಳ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.