ADVERTISEMENT

ಚಂದ್ರಯಾನ ಸಂಭ್ರಮದಲ್ಲಿ ಭಾಗಿ: ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ

ಪಿಟಿಐ
Published 24 ಆಗಸ್ಟ್ 2023, 14:40 IST
Last Updated 24 ಆಗಸ್ಟ್ 2023, 14:40 IST
ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ
ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ   

ಢಾಕಾ/ಜೋಹಾನಸ್‌ಬರ್ಗ್: ಚಂದ್ರಯಾನ–3 ಯಶಸ್ಸಿಗಾಗಿ ಬಾಂಗ್ಲಾದೇಶ ಕೂಡಾ ಭಾರತದ ಜೊತೆಗೂಡಿ ಸಂಭ್ರಮಿಸಲಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಪ್ರತಿಕ್ರಿಯಿಸಿದ್ದಾರೆ.

‘ಪ್ರಧಾನಿ ಹಸೀನಾ ಈ ಸಂಬಂಧ ಭಾರತದ ಪ್ರಧಾನಿಯವರಿಗೆ ಅಭಿನಂದನೆ ಸಂದೇಶ ಕಳುಹಿಸಿದ್ದಾರೆ’ ಎಂದು ಎಕ್ಸ್‌ ಜಾಲತಾಣದಲ್ಲಿ ಬಾಂಗ್ಲಾದೇಶ ಸರ್ಕಾರ ಟ್ವೀಟ್ ಮಾಡಿದೆ.

‘ಸಂಭ್ರಮದ ಕ್ಷಣಗಳಲ್ಲಿ ಬಾಂಗ್ಲಾದೇಶದ ಜನರು ಭಾಗಿಯಾಗಲಿದ್ದಾರೆ. ಇದು, ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಹೆಮ್ಮೆಯ ಕ್ಷಣ ಮತ್ತು ಸ್ಫೂರ್ತಿದಾಯಕವಾದುದು ಎಂದು ಶೇಖ್‌ ಹಸೀನಾ ಸಂದೇಶದಲ್ಲಿ ತಿಳಿಸಿದ್ದಾರೆ’ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.