ADVERTISEMENT

100 ಸರಕುಗಳ ಮೇಲಿನ ಸುಂಕ ಕಡಿತಕ್ಕೆ ಬಾಂಗ್ಲಾ ಸಿದ್ಧತೆ

ಪಿಟಿಐ
Published 20 ಮೇ 2025, 15:45 IST
Last Updated 20 ಮೇ 2025, 15:45 IST
<div class="paragraphs"><p>ಬಾಂಗ್ಲಾದೇಶ&nbsp;ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌</p></div>

ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌

   

ರಾಯಿಟರ್ಸ್‌ ಚಿತ್ರ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ವಿದೇಶಗಳಿಂದ ಆಮದು ಮಾಡಿಕೊಳ್ಳುವ 100 ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲು ಮುಂದಾಗಿದೆ.

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಓಲೈಸುವ ನಿಟ್ಟಿನಲ್ಲಿ, ವಿಶೇಷವಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.‌

ಟ್ರಂಪ್‌ ಅವರ ಪ‍್ರತಿಸುಂಕ ನೀತಿಯಿಂದಾಗಿ ಬಾಂಗ್ಲಾದೇಶವೂ ಹೆಚ್ಚುವರಿ ಶೇ 37ರಷ್ಟು ಸುಂಕವನ್ನು ಭರಿಸುವ ಸಂದಿಗ್ಧಕ್ಕೆ ಸಿಲುಕಿದೆ. ಇದರಿಂದ ಪಾರಾಗಲು ಅಮೆರಿಕದೊಟ್ಟಿಗೆ ಮಾತುಕತೆಗೆ ಪೂರಕ ಪರಿಸ್ಥಿತಿ ಸೃಷ್ಟಿಸುವ ನಿಟ್ಟಿನಲ್ಲಿ ಆಮದು ಸುಂಕ ಕಡಿತಕ್ಕೆ ಚಿಂತನೆ ನಡೆಸಿದೆ ಎಂದೂ ಹೇಳಲಾಗಿದೆ. 

ಮುಂಬರಲಿರುವ ಬಜೆಟ್‌ನಲ್ಲಿ ಈ ಆಮದು ಸುಂಕ ಇಳಿಕೆಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ. ರಾಷ್ಟ್ರೀಯ ಆದಾಯ ಮಂಡಳಿ (ಎನ್‌ಆರ್‌ಬಿ) ಜತೆಗೆ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಅವರು ಸಭೆ ನಡೆಸಿ, ಈ ಪ್ರಸ್ತಾಪಕ್ಕೆ ತಾತ್ಕಾಲಿಕ ಅನುಮೋದನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. 

ಸರ್ಕಾರ ಆಮದು ಸುಂಕ ಕಡಿತಗೊಳಿಸಲು ಪಟ್ಟಿ ಮಾಡಿರುವ ಸರಕುಗಳ ಪೈಕಿ ಅಡುಗೆ ಎಣ್ಣೆ, ಶಸ್ತ್ರಾಸ್ತ್ರ, ಯುದ್ಧ ವಿಮಾನಗಳು, ಕ್ಷಿಪಣಿಗಳು ಸೇರಿದಂತೆ ಸರ್ಕಾರದಿಂದ ಖರೀದಿಸಲ್ಪಡುವ ಉತ್ಪನ್ನಗಳೇ ಹೆಚ್ಚಾಗಿವೆ ಎಂದೂ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.