ADVERTISEMENT

ಪೂರ್ವ ಬಾಂಗ್ಲಾದಲ್ಲಿ ರೈಲು ಅಪಘಾತ: 15 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 6:32 IST
Last Updated 12 ನವೆಂಬರ್ 2019, 6:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಢಾಕಾ: ಪೂರ್ವ ಬಾಂಗ್ಲಾದಲ್ಲಿ ಎರಡು ರೈಲುಗಳು ಮುಖಾಮುಖಿಯಾಗಿಕನಿಷ್ಠ 15 ಪ್ರಯಾಣಿಕರು ಮೃತಪಟ್ಟು, 58 ಜನರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕಸ್ಬಾ ಪಟ್ಟಣದ ಮಂಡೋಲ್‌ಭಾಗ್‌ ರೈಲು ನಿಲ್ದಾಣದಲ್ಲಿ ಢಾಕಾ ಇಂಟರ್‌ಸಿಟಿ ಮತ್ತು ಚಿತ್ತಗಾಂಗ್‌ ರೈಲುಗಳ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

‘ಅಪಘಾತದಲ್ಲಿ ಕನಿಷ್ಠ 15 ಜನ ಮೃತಪಟ್ಟಿದ್ದಾರೆ. 58 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ’ಎಂದು ಸ್ಥಳೀಯ ಪೊಲೀಸ್‌ ಮುಖ್ಯಸ್ಥ ಅನ್ಸೂರ್ ರೆಹಮಾನ್‌ ಹೇಳಿದ್ದಾರೆ.

ADVERTISEMENT

ಅಪಘಾತದ ನಂತರ ಢಾಕಾ ನಿಲ್ದಾಣದಲ್ಲಿರೈಲು ಸೇವೆಗಳನ್ನು ನಿಲ್ಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.