ADVERTISEMENT

ಬೀಜಿಂಗ್‌ನಲ್ಲಿ ಕೋವಿಡ್ ಇಳಿಕೆ: ರೆಸ್ಟೋರೆಂಟ್‌ಗಳ ಆರಂಭ

ಏಜೆನ್ಸೀಸ್
Published 6 ಜೂನ್ 2022, 12:41 IST
Last Updated 6 ಜೂನ್ 2022, 12:41 IST
ಚೀನಾದ ಬೀಜಿಂಗ್‌ನಲ್ಲಿ ಸೋಮವಾರದಿಂದಲೇ ರೆಸ್ಟೊರೆಂಟ್‌ಗಳು, ವಸ್ತು ಸಂಗ್ರಹಾಲಯಗಳು, ಥಿಯೇಟರ್ ಮತ್ತು ಜಿಮ್ ಕೇಂದ್ರಗಳು ಆರಂಭವಾದವು -ಎಎಫ್‌ಪಿ ಚಿತ್ರ
ಚೀನಾದ ಬೀಜಿಂಗ್‌ನಲ್ಲಿ ಸೋಮವಾರದಿಂದಲೇ ರೆಸ್ಟೊರೆಂಟ್‌ಗಳು, ವಸ್ತು ಸಂಗ್ರಹಾಲಯಗಳು, ಥಿಯೇಟರ್ ಮತ್ತು ಜಿಮ್ ಕೇಂದ್ರಗಳು ಆರಂಭವಾದವು -ಎಎಫ್‌ಪಿ ಚಿತ್ರ   

ಬೀಜಿಂಗ್(ಎಪಿ): ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಭಾನುವಾರ ಕೇವಲ 6 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ಇದರ ಪರಿಣಾಮ ಕಳೆದೊಂದು ತಿಂಗಳಿಂದ ಮುಚ್ಚಿದ್ದ ರೆಸ್ಟೋರೆಂಟ್‌ಗಳು ಮತ್ತೆ ಆರಂಭವಾಗಿವೆ.

ಅಲ್ಲದೆ ವಸ್ತು ಸಂಗ್ರಹಾಲಯಗಳು, ಥಿಯೇಟರ್‌ಗಳು ಮತ್ತು ಜಿಮ್ ಕೇಂದ್ರಗಳಲ್ಲಿ ಶೇ 75ರಷ್ಟು ಜನರು ಸೇರಲು ಅವಕಾಶ ನೀಡಲಾಗಿದೆ. ಜೊತೆಗೆ ಈವರೆಗೆ ಜನರು ಆರ್ಡರ್ ಮಾಡಿದ್ದ ವಸ್ತುಗಳನ್ನುಡೆಲಿವರಿ ಡ್ರೈವರ್‌ಗಳು ವಸತಿ ಸಮುಚ್ಛಯಗಳಲ್ಲಿ ಇಟ್ಟು ಹೊರಡುತ್ತಿದ್ದರು. ಇದೀಗ ಈ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೇ ಬಂದು ನೀಡಲಾಗುತ್ತಿದೆ.

ಈಗಾಗಲೇ ಭಾಗಶಃ ಆರಂಭವಾಗಿರುವ ಶಾಲೆಗಳು ಜೂನ್ 13ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಜೂನ್ 20ರಂದು ಶಿಶು ವಿಹಾರಗಳು ಆರಂಭವಾಗಲಿವೆ.

ADVERTISEMENT

2.2 ಕೋಟಿ ಜನರು ಇರುವ ನಗರದಲ್ಲಿ 1800ಕ್ಕೂ ಹೆಚ್ಚು ಮಂದಿಗೆ ಕೋವಿಡ್ ದೃಢಪಟ್ಟ ಸಂದರ್ಭದಲ್ಲಿ ಅಧಿಕಾರಿಗಳು ಸಾಮೂಹಿಕ ಕೋವಿಡ್ ಪತ್ತೆ ಪರೀಕ್ಷೆಯನ್ನು ಆರಂಭಿಸಿದ್ದರು. ನಗರದಾದ್ಯಂತ ಲಾಕ್‌ಡೌನ್ ಹೇರಿ ಜನರು ತಮ್ಮ ನಿವಾಸ ಬಿಟ್ಟು ಹೊರ ಬರದಂತೆ ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.