ADVERTISEMENT

5 ಲಕ್ಷ ಭಾರತೀಯರಿಗೆ ಅಮೆರಿಕ ಪೌರತ್ವ?

ಪಿಟಿಐ
Published 8 ನವೆಂಬರ್ 2020, 6:50 IST
Last Updated 8 ನವೆಂಬರ್ 2020, 6:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ಸೂಕ್ತ ದಾಖಲೆಗಳಿಲ್ಲದೆ ನೆಲೆಸಿರುವ ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1 ಕೋಟಿ 10 ಲಕ್ಷ ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ ಅವರು ಆಲೋಚಿಸಿದ್ದಾರೆ.

ಅಲ್ಲದೆ ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕದಲ್ಲಿ ಪ್ರವೇಶ ಪಡೆಯುವ ಬಗ್ಗೆಯೂ ಕಾರ್ಯಕ್ರಮ ರೂಪಿಸಲಿದ್ದಾರೆ ಬೈಡನ್‌ ಅವರ ಪ್ರಚಾರ ಕಾರ್ಯ ತಂಡವು ಬಿಡುಗಡೆ ಮಾಡಿರುವ ನೀತಿ ನಿರೂಪಣಾ ದಾಖಲೆಗಳಲ್ಲಿ ಹೇಳಲಾಗಿದೆ.

ಕುಟುಂಬ ಒಟ್ಟಿಗೇ ಇರಬೇಕೆಂಬುದಕ್ಕೆ ಆದ್ಯತೆ ನೀಡಲು ವಲಸೆ ಸುಧಾರಣಾ ನೀತಿ ಕುರಿತು ಶಾಸನ ರೂಪಿಸಲಿದೆ. ಕುಟುಂಬ ಆಧಾರಿತ ವಲಸೆಗೆ ಬೈಡನ್‌ ಆಡಳಿತ ಬೆಂಬಲ ನೀಡಲಿದೆ. ಅವಿಭಕ್ತ ಕುಟುಂಬದ ಹಿತಾಸಕ್ತಿ ಕಾಪಾಡುವುದು ಅಮೆರಿಕದ ಪ್ರಮುಖ ನೀತಿಯಾಗಿರಲಿದೆ’ ಎಂದು ದಾಖಲೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.