ADVERTISEMENT

ಸುಂಟರಗಾಳಿಗೆ ಅಮೆರಿಕ ತತ್ತರ: ತುರ್ತು ಪರಿಸ್ಥಿತಿ ಘೋಷಣೆ

ಏಜೆನ್ಸೀಸ್
Published 26 ಮಾರ್ಚ್ 2023, 11:25 IST
Last Updated 26 ಮಾರ್ಚ್ 2023, 11:25 IST
ಮಿಸಿಸಿಪ್ಪಿಯ ರೋಲಿಂಗ್ ಫೋರ್ಕ್ ಪಟ್ಟಣದಲ್ಲಿ ಸುಂಟರಗಾಳಿಯ ಪರಿಣಾಮ ಮರಗಳು ಮನೆಗಳ ಮೇಲೆ ಬಿದ್ದು ಹಾನಿಗೊಳಗಾಗಿರುವುದು– ಎಎಫ್‌ಪಿ ಚಿತ್ರ
ಮಿಸಿಸಿಪ್ಪಿಯ ರೋಲಿಂಗ್ ಫೋರ್ಕ್ ಪಟ್ಟಣದಲ್ಲಿ ಸುಂಟರಗಾಳಿಯ ಪರಿಣಾಮ ಮರಗಳು ಮನೆಗಳ ಮೇಲೆ ಬಿದ್ದು ಹಾನಿಗೊಳಗಾಗಿರುವುದು– ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌ (ಎಪಿ): ಮಿಸಿಸಿಪ್ಪಿ ಮತ್ತು ಅಲಬಾಮದಲ್ಲಿ ಬೀಸಿದ ಭೀಕರ ಸುಂಟರಗಾಳಿಯ ಪರಿಣಾಮ ಅಪಾರ ಹಾನಿಯುಂಟಾಗಿದ್ದು, ಅಧ್ಯಕ್ಷ ಜೋ ಬೈಡನ್ ಭಾನುವಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಗಾಳಿಗೆ ಹಲವೆಡೆ ಕಟ್ಟಡಗಳು ಬಿದ್ದಿದ್ದು, ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ವಾಹನಗಳು ಜಖಂಗೊಂಡಿವೆ.

ಪ್ರಬಲ ಚಂಡಮಾರುತದೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ. ಹಾನಿಗೊಳಗಾದ ಮನೆಗಳ ದುರಸ್ಥಿ, ತಾತ್ಕಾಲಿಕ ಮನೆಗಳ ನಿರ್ಮಾಣ, ಜನರ ಸ್ಥಳಾಂತರ ಸೇರಿ ಅಗತ್ಯ ನೆರವು ನೀಡಲಾಗುವುದು ಎಂದು ಬೈಡನ್‌ ಘೋಷಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಾವಿನ ಸಂಖ್ಯೆ ಏರಿಕೆ: ಸುಂಟರಗಾಳಿಯಿಂದ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಮಿಸಿಸಿಪ್ಪಿಯ ರಾಲಿಂಗ್ ಫೋರ್ಕ್‌ ಪಟ್ಟಣದಲ್ಲಿ 2,000 ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.