ADVERTISEMENT

ಮೊದಲ ದಿನವೇ ಹಲವು ನಿರ್ಧಾರ: ಬೈಡನ್‌ರಿಂದ 15 ಆದೇಶ

ಟ್ರಂಪ್‌ ನೀತಿಗೆ ಕೊನೆ:

ಪಿಟಿಐ
Published 20 ಜನವರಿ 2021, 17:54 IST
Last Updated 20 ಜನವರಿ 2021, 17:54 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕದ 46ನೇ ಅಧ್ಯಕ್ಷರಾಗಿ ಪ‍್ರಮಾಣ ವಚನ ಸ್ವೀಕರಿಸಿದ ಬಳಿಕ ಜೋ ಬೈಡನ್‌ ಅವರು 15 ಅಧ್ಯಕ್ಷೀಯ ಆದೇಶಗಳಿಗೆ ಸಹಿ ಮಾಡಲಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್‌ ಒಪ್ಪಂದಕ್ಕೆ ಮರುಸೇರ್ಪಡೆ, ನೂರು ದಿನ ಮಾಸ್ಕ್‌ ಧರಿಸುವುದು ಕಡ್ಡಾಯ, ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳಿಂದ ವಲಸೆ ನಿಷೇಧ ತೆರವು ಇವುಗಳಲ್ಲಿ ಸೇರಿವೆ. ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಲವು ನೀತಿಗಳನ್ನು ಈ ಆದೇಶಗಳ ಮೂಲಕ ಬೈಡನ್‌ ರದ್ದುಪಡಿಸಲಿದ್ದಾರೆ.

ವಲಸೆಗೆ ಸಂಬಂಧಿಸಿ ಸಮಗ್ರವಾದ ನೀತಿಯ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಬೈಡನ್‌ ಅವರು ಅಧ್ಯಕ್ಷರಾಗಿ ಕೈಗೊಳ್ಳುವ ಆರಂಭಿಕ ಕ್ರಮಗಳಲ್ಲಿ ಒಂದು ಎಂದು ಶ್ವೇತ ಭವನದ ಹೊಸ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದಾರೆ.

ಅಕ್ರಮ ವಲಸಿಗರಿಗೆ ಪೌರತ್ವ ನೀಡಲು ಎಂಟು ವರ್ಷಗಳ ಪ್ರಕ್ರಿಯೆ; ಪ್ರತಿ ದೇಶಕ್ಕೆ ಇಷ್ಟೇ ಗ್ರೀನ್‌ ಕಾರ್ಡ್‌ ಎಂಬ ನಿಯಮ ರದ್ದು ಬೈಡನ್‌ ಅವರ ವಲಸೆ ನೀತಿಯ ಪ್ರಮುಖ ಅಂಶಗಳು. ಅಮೆರಿಕದಲ್ಲಿರುವ ಭಾರತದ ಮಾಹಿತಿ ತಂತ್ರಜ್ಞಾನ ಪರಿಣತರಿಗೆ ಈ ನೀತಿಯಿಂದಾಗಿ ಅನುಕೂಲ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ. ಈಗ, ಕಾನೂನುಬದ್ಧ ಕಾಯಂ ನಿವಾಸದ ಅವಕಾಶ ಪಡೆದುಕೊಳ್ಳಲು ದಶಕಗಳ ಕಾಲ ಕಾಯಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.