ADVERTISEMENT

ಅಮೆರಿಕ: ಸಿಐಎನ ನಿರ್ದೇಶಕರಾಗಿ ವಿಲಿಯಂ ಜೆ ಬರ್ನ್ಸ್‌ ನೇಮಕ

ಪಿಟಿಐ
Published 12 ಜನವರಿ 2021, 9:43 IST
Last Updated 12 ಜನವರಿ 2021, 9:43 IST
ವಿಲಿಯಂ ಜೆ ಬರ್ನ್ಸ್‌
ವಿಲಿಯಂ ಜೆ ಬರ್ನ್ಸ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಜೋ ಬೈಡನ್ ಅವರು ವಿಲಿಯಂ ಜೆ ಬರ್ನ್ಸ್‌ ಅವರನ್ನು ಸಿಐಎನ ನಿರ್ದೇಶಕರಾಗಿ ಸೋಮವಾರ ನಾಮನಿರ್ದೇಶನ ಮಾಡಿದ್ದಾರೆ.

ವಿಲಿಯಂ ಜೆ ಬರ್ನ್ಸ್‌ ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಸೇವೆಗಳಲ್ಲಿ 33 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಕೆಲ ಅಧ್ಯಕ್ಷರ ಆಡಳಿತಾವಧಿಯಲ್ಲಿ ವಿವಿಧ ರಾಷ್ಟ್ರೀಯ ಭದ್ರತಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

‘ಬರ್ನ್ಸ್ ಅವರು ಒಬ್ಬ ಉತ್ತಮ ರಾಜತಾಂತ್ರಿಕ ಅಧಿಕಾರಿ. ದೇಶ ಮತ್ತು ಜನರನ್ನು ಸುರಕ್ಷಿತವಾಗಿರಿಸುವಲ್ಲಿ ದಶಕಗಳ ಉತ್ತಮ ಅನುಭವವನ್ನು ಹೊಂದಿದ್ದಾರೆ’ ಎಂದು ಜೋ ಬೈಡನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.