ADVERTISEMENT

ಹೋರಾಟದೊಂದಿಗೆ ಬೆಳೆದು ಬಂದ ಕಮಲಾ: ಜೋ ಬೈಡನ್ ಶ್ಲಾಘನೆ

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ

ಪಿಟಿಐ
Published 21 ಆಗಸ್ಟ್ 2020, 7:04 IST
Last Updated 21 ಆಗಸ್ಟ್ 2020, 7:04 IST
ಜೋ ಬೈಡೆನ್‌
ಜೋ ಬೈಡೆನ್‌   

ವಾಷಿಂಗ್ಟನ್: ಜೀವನದುದ್ದಕ್ಕೂ ಹೋರಾಡುತ್ತಲೇ ಬದುಕು ರೂಪಿಸಿಕೊಂಡ ಸೆನಟರ್ ಕಮಲಾ ಹ್ಯಾರಿಸ್ ಅವರು ಅಮೆರಿಕದಲ್ಲಿ ಪ್ರಾಬಲ್ಯ ಹೊಂದಿರುವ ಸೆನಟರ್ ಆಗಿದ್ದಾರೆ. ಅವರ ಬದಕಿನ ಕಥೆ ಒಂದು ರೀತಿ ಅಮೆರಿಕದವರ ಕಥೆಯೇ ಆಗಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಶ್ಲಾಘಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾದ ನಂತರ ಅವರು ಮಾತನಾಡಿದರು.

’ಅಮೆರಿಕದ ನಾಗರಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಅಧ್ಯಕ್ಷರಾಗುವವರ ಆದ್ಯ ಕರ್ತವ್ಯ. ಆದರೆ, ನಾನೊಬ್ಬನೇ ಆ ಕೆಲಸ ಮಾಡುವುದು ಅಸಾಧ್ಯವಾಗಿದೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಉಪಾಧ್ಯಕ್ಷರು ಜತೆಯಾಗುತ್ತಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಇದೇ ವೇಳೆ ಕಮಲಾ ಅವರ ಕುಟುಂಬದವರನ್ನು ಪರಿಚಯಿಸುತ್ತಾ, ಅವರು ಈ ಹಂತದವರೆಗೆ ಬೆಳೆಯುವುದಕ್ಕೆ ಎಷ್ಟೆಲ್ಲ ಅಡೆತಡೆಗಳನ್ನು ಎದುರಿಸಿದರು ಎಂಬುದನ್ನು ವಿವರಿಸಿದರು.

ADVERTISEMENT

’ಕಮಲಾ ಅವರ ಬದುಕಿನ ಕಥೆ, ಅಮೆರಿಕದವರ ಕಥೆಯೂ ಆಗಿದೆ. ನಮ್ಮ ದೇಶದಲ್ಲಿ ಮಹಿಳೆ, ಕಪ್ಪು ಮಹಿಳೆ, ಕಪ್ಪು ಅಮೆರಿಕನ್ನರು, ದಕ್ಷಿಣ ಏಷ್ಯಾ ಅಮೆರಿಕನ್ನರು, ವಲಸಿಗರು ಎಂಬಂತಹ ವಿಭಜನೆಯೊಂದಿಗೆ ಜೀವನದಲ್ಲಿ ಯಾರು ಏನೆಲ್ಲ ಕಷ್ಟಗಳನ್ನು ಅಡೆತಡೆಗಳನ್ನು ಎದುರಿಸಿದ್ದಾರೆಂಬುದು ಅವರಿಗೆ ಗೊತ್ತಿದೆ. ಕಮಲಾ ಅವರು ಇವನ್ನೆಲ್ಲ ಎದುರಿಸಿ ಬೆಳೆದು ಬಂದಿದ್ದಾರೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.