ADVERTISEMENT

ಅಮೆರಿಕ ಕಾರ್ಯಾಚರಣೆ ವೇಳೆ ತನ್ನನ್ನು ತಾನೆ ಸ್ಫೋಟಿಸಿಕೊಂಡ ಐಸಿಸ್ ನಾಯಕ: ಬೈಡನ್

ಏಜೆನ್ಸೀಸ್
Published 4 ಫೆಬ್ರುವರಿ 2022, 5:08 IST
Last Updated 4 ಫೆಬ್ರುವರಿ 2022, 5:08 IST
ಜೋ ಬೈಡನ್: ರಾಯಿಟರ್ಸ್ ಚಿತ್ರ
ಜೋ ಬೈಡನ್: ರಾಯಿಟರ್ಸ್ ಚಿತ್ರ   

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಪಡೆಗಳು ನಡೆಸಿದ ದಾಳಿಯ ಸಮಯದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ನಾಯಕ ಸಾವಿಗೀಡಾಗಿದ್ದಾನೆ ಎಂದು ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ.

‘ಕಳೆದ ರಾತ್ರಿ ನನ್ನ ನಿರ್ದೇಶನದ ಮೇರೆಗೆ, ವಾಯುವ್ಯ ಸಿರಿಯಾದಲ್ಲಿ ಅಮೆರಿಕ ಮಿಲಿಟರಿ ಪಡೆಗಳು ಅಮೆರಿಕದ ಜನರು ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ರಕ್ಷಿಸಲು, ಜಗತ್ತನ್ನು ಸುರಕ್ಷಿತ ಸ್ಥಳವಾಗಿಸಲು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡವು’ಎಂದು ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಐಸಿಸ್ ನಾಯಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ನಮ್ಮ ಸಶಸ್ತ್ರ ಪಡೆಗಳ ಕೌಶಲ್ಯ ಮತ್ತು ಶೌರ್ಯಕ್ಕೆ ಧನ್ಯವಾದಗಳು, ನಾವು ಐಸಿಸ್‌ನ ನಾಯಕ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಶಿಯನನ್ನು ಯುದ್ಧಭೂಮಿಯಿಂದ ತೆಗೆದು ಹಾಕಿದ್ದೇವೆ. ಎಲ್ಲಾ ಅಮೆರಿಕನ್ನರು ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಮರಳಿದ್ದಾರೆ’ಎಂದು ಬೈಡನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.