ADVERTISEMENT

ಅಫ್ಗನ್‌ನಲ್ಲಿ ತಾಲಿಬಾನ್‌ ಆಳ್ವಿಕೆಗೆ ಬೈಡನ್ ಒಪ್ಪವುದಿಲ್ಲ: ಶ್ವೇತಭವನ

ಪಿಟಿಐ
Published 24 ಫೆಬ್ರುವರಿ 2021, 8:31 IST
Last Updated 24 ಫೆಬ್ರುವರಿ 2021, 8:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ‘ಆಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ನಡೆಸುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಒಪ್ಪುವುದಿಲ್ಲ ಎಂದು ಹೇಳಿರುವ ಶ್ವೇತಭವನ, ಯುದ್ಧಪೀಡಿತವಾಗಿರುವ ಆ ದೇಶದಲ್ಲಿ ಶಾಂತಿ ನೆಲೆಸಲು ಬೇಕಾದ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುವ ವಿಚಾರವನ್ನು ಒತ್ತಿ ಹೇಳಿದೆ.

‘ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ನಡೆಸಲು ಬೈಡನ್ ಒಪ್ಪುತ್ತಾರೆಯೇ‘ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಕಿ, ‘ಈ ವಿಚಾರವನ್ನು ಅವರು ಬಹಶಃ ಒಪ್ಪುವುದಿಲ್ಲ. ಆದರೆ ಅಫ್ಗನ್‌ನಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅದು ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ‘ ಎಂದು ಹೇಳಿದರು.

ತಾಲಿಬಾನ್ ಮತ್ತು ಅಫ್ಗನ್‌ ಸರ್ಕಾರದ ನಡುವೆ ಶಾಶ್ವತ ಯುದ್ಧವಿರಾಮ ಮತ್ತು ಶಾಂತಿ ಸ್ಥಾಪನೆ ಹಾಗೂ ಕಳೆದ ವರ್ಷ ಮೇ 1 ರೊಳಗೆ ಎಲ್ಲ ವಿದೇಶಿ ರಕ್ಷಣಾ ಪಡೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಫೆಬ್ರವರಿ 2020ರಲ್ಲಿ ಅಮೆರಿಕ ಮತ್ತು ತಾಲಿಬಾನ್‌ ಒಂದು ಒಪ್ಪಂದಕ್ಕೆ ಬಂದಿದ್ದವು. ಪ್ರಸ್ತುತ ಅಫ್ಗಾನಿಸ್ತಾನದಲ್ಲಿ 2500 ಮಂದಿ ಅಮೆರಿಕ ಸೈನಿಕರಿದ್ದಾರೆ.

ADVERTISEMENT

2001ರಲ್ಲಿಅಮೆರಿಕದ ನೆರವಿನಿಂದ ಅಲ್ಲಿ ತಾಲಿಬಾನ್‌ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.