ADVERTISEMENT

ಉತ್ತರ ಅಮೆರಿಕ: ಇದಾಹೊ ತೋಳಗಳ ಹತ್ಯೆ: ಮಸೂದೆಗೆ ಅನುಮೋದನೆ

ಉತ್ತರ ಅಮೆರಿಕದ ಇದಾಹೊ ಪ್ರಾಂತ್ಯದಲ್ಲಿ ಇದಾಹೊ ತೋಳಗಳ ಹಾವಳಿ ತಗ್ಗಿಸಲು ಕ್ರಮ

ಏಜೆನ್ಸೀಸ್
Published 28 ಏಪ್ರಿಲ್ 2021, 8:32 IST
Last Updated 28 ಏಪ್ರಿಲ್ 2021, 8:32 IST
ತೋಳ (ಪ್ರಾತಿನಿಧಿಕ ಚಿತ್ರ) 
ತೋಳ (ಪ್ರಾತಿನಿಧಿಕ ಚಿತ್ರ)    

ಬೊಯ್ಸ್‌, ಇದಾಹೊ: ಇದಾಹೊ ತೋಳಗಳನ್ನು ಕೊಲ್ಲಲು ಗುತ್ತಿಗೆದಾರರ ನೇಮಕಕ್ಕೆ ಅನುಮತಿ ನೀಡುವ ಮಸೂದೆಗೆ ಉತ್ತರ ಅಮೆರಿಕದ ಇದಾಹೊ ಸಂಸತ್‌ ಅನುಮೋದನೆ ನೀಡಿದೆ.

ಈ ಕಾಯ್ದೆ ಜಾರಿಗೆ ಬಂದರೆ, ಇದಾಹೊ ತೋಳಗಳ ಸಂಖ್ಯೆ ಶೇ 90ರಷ್ಟು ಕಡಿಮೆಯಾಗಲಿದೆ

ಸಂಸತ್‌ನಲ್ಲಿ ಮಂಡನೆಯಾದ ಈ ಮಸೂದೆಯನ್ನು 58–11 ಮತಗಳಿಂದ ಅಂಗೀಕರಿಸಲಾಯಿತು. ನಂತರ ಈ ಮಸೂದೆಯನ್ನು ಅನುಮೋದನೆಗಾಗಿ ಗವರ್ನರ್‌ ಬ್ರ್ಯಾಡ್‌ ಲಿಟಲ್‌ ಅವರಿಗೆ ಕಳುಹಿಸಲಾಗಿದೆ.

ADVERTISEMENT

ಈಗ ಇದಾಹೊ ತೋಗಳಗಳ ಸಂಖ್ಯೆ 1,500 ಅಧಿಕ ಇದೆ. ಅವುಗಳನ್ನು ಕೊಲ್ಲಲು ಅನುವು ಮಾಡಿಕೊಡುವ ಶಾಸನ ಜಾರಿಗೊಂಡರೆ, ಅವುಗಳ ಸಂಖ್ಯೆ 150ಕ್ಕೆ ಇಳಿಯುವುದು. ಇದರಿಂದ ಹಸು, ಕುರಿ ಹಾಗೂ ಇತರ ವನ್ಯಮೃಗಗಳ ಮೇಲೆ ನಡೆಯುತ್ತಿದ್ದ ತೋಳಗಳ ದಾಳಿ ತಪ್ಪಲಿದೆ ಎಂದು ಈ ಮಸೂದೆಯನ್ನು ಬೆಂಬಲಿಸುವ ಸಂಸದರು ಹೇಳಿದರು.

‘ಈ ತೋಳಗಳು ಕಡವೆ, ಜಿಂಕೆ ಹಾಗೂ ದನಗಾಹಿಗಳ ಮೇಲೆ ದಾಳಿ ಮಾಡುತ್ತಿದ್ದವು. ನೂತನ ಕಾಯ್ದೆಯು ತೋಳಗಳ ಸಂಖ್ಯೆಯನ್ನು ನಿಯಂತ್ರಿಸಲು ತೋಳಗಳ ನಿಯಂತ್ರಣ ಮಂಡಳಿಗೆ ಅಧಿಕಾರ ನೀಡುವುದು’ ಎಂದು ಸದನದ ನಾಯಕ ಮೈಕ್‌ ಮೊಯ್ಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.