ADVERTISEMENT

ರಷ್ಯಾದ ಏಂಗಲ್ಸ್‌ ವಾಯು ನೆಲೆಯಲ್ಲಿ ಸ್ಫೋಟ: ವರದಿ

ರಾಯಿಟರ್ಸ್
Published 26 ಡಿಸೆಂಬರ್ 2022, 1:23 IST
Last Updated 26 ಡಿಸೆಂಬರ್ 2022, 1:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉಕ್ರೇನ್‌ನಿಂದ ನೂರು ಮೈಲು ದೂರದಲ್ಲಿರುವ ರಷ್ಯಾದ ಏಂಗಲ್ಸ್‌ ವಾಯು ನೆಲೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಉಕ್ರೇನ್‌ ಮತ್ತು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ ಸ್ಫೋಟದ ಕುರಿತು ಸಂಬಂಧಿತ ಇಲಾಖೆಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.

2 ಸ್ಫೋಟಗಳು ಸಂಭವಿಸಿವೆ ಎಂದು ಆರ್‌ಬಿಸಿ–ಉಕ್ರೇನ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನ್‌ ದಾಳಿಯಿಂದ ಸ್ಫೋಟ ನಡೆದಿದೆಯೇ ಅಥವಾ ವಾಯುನೆಲೆಯಲ್ಲಿನ ಅವಘಡ ಕಾರಣವೇ ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

ಸ್ಥಳೀಯರನ್ನು ಉಲ್ಲೇಖಿಸಿ ರಷ್ಯಾದ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಸೈರನ್‌ ಕೇಳಿದ್ದು ನಂತರ ಸ್ಫೋಟದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.