ADVERTISEMENT

ಇಂಡೋನೇಷ್ಯಾ: ಗವರ್ನರ್‌ ಪುತ್ರನ ಮೃತದೇಹ ಸ್ವಿಟ್ಜರ್‌ರ್ಲೆಂಡ್‌ನಲ್ಲಿ ಪತ್ತೆ

2 ವಾರಗಳ ಹಿಂದೆ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದರು

ಏಜೆನ್ಸೀಸ್
Published 10 ಜೂನ್ 2022, 11:36 IST
Last Updated 10 ಜೂನ್ 2022, 11:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೆವಾ: ಈಜಲು ಹೋಗಿ ಎರಡು ವಾರಗಳ ಹಿಂದೆ ನದಿಯಲ್ಲಿ ನಾಪತ್ತೆಯಾಗಿದ್ದ ಇಂಡೋನೇಷ್ಯಾದ ಗವರ್ನರ್‌ ಪುತ್ರನ ಮೃತದೇಹ ಪತ್ತೆಯಾಗಿದೆ ಎಂದುಸ್ವಿಟ್ಜರ್‌ಲೆಂಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

‘ವೆಸ್ಟ್‌ ಜಾವಾ ಗವರ್ನರ್‌ ರಿದ್ವಾನ್ ಕಮಿಲ್‌ ಮುಮ್ತಾಜ್‌ ಅವರ ಪುತ್ರ ಎಮೆರಿಲ್‌ ಎರಿಲ್‌ ಕಾನ್‌ ಮುಮ್ತಾಜ್‌ (22) ಅವರ ಮೃತದೇಹ ಆರೆ ನದಿಯ ಅಣೆಕಟ್ಟೆಯಲ್ಲಿ ಪತ್ತೆಯಾಗಿದೆ. ಇವರು ಮೇ 26ರಂದು ನಾಪತ್ತೆಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆ ಆದಂದಿನಿಂದಲೂ ಡ್ರೋನ್‌, ಬೋಟ್‌ ಅನ್ನು ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.