ADVERTISEMENT

ಜನವರಿ ವೇಳೆಗೆ ಕೊರೊನಾ ವೈರಸ್ ಲಸಿಕೆ ಲಭ್ಯ: ಬ್ರೆಜಿಲ್

ರಾಯಿಟರ್ಸ್
Published 9 ಸೆಪ್ಟೆಂಬರ್ 2020, 4:06 IST
Last Updated 9 ಸೆಪ್ಟೆಂಬರ್ 2020, 4:06 IST
ಬ್ರೆಜಿಲ್‌ನ ಹಂಗಾಮಿ ಆರೋಗ್ಯ ಸಚಿವ ಎಡ್ವರ್ಡೊ ಪಜುಲ್ಲೊ – ರಾಯಿಟರ್ಸ್ ಚಿತ್ರ
ಬ್ರೆಜಿಲ್‌ನ ಹಂಗಾಮಿ ಆರೋಗ್ಯ ಸಚಿವ ಎಡ್ವರ್ಡೊ ಪಜುಲ್ಲೊ – ರಾಯಿಟರ್ಸ್ ಚಿತ್ರ   

ಬ್ರೆಸಿಲಿಯಾ: ದೇಶದ ಜನರಿಗೆ ಜನವರಿ ವೇಳೆಗೆ ಕೊರೊನಾ ವೈರಸ್ ಲಸಿಕೆ ಲಭ್ಯವಾಗಲಿದೆ ಎಂದು ಬ್ರೆಜಿಲ್‌ನ ಹಂಗಾಮಿ ಆರೋಗ್ಯ ಸಚಿವ ಎಡ್ವರ್ಡೊ ಪಜುಲ್ಲೊ ಹೇಳಿದ್ದಾರೆ.

‘ಉತ್ಪದಕರ ಜತೆಗಿನ ಒಪ್ಪಂದಗಳನ್ನು ನಾವು ಕೊನೆಗೊಳಿಸುತ್ತಿದ್ದೇವೆ. ಜನವರಿ ವೇಳೆಗೆ ನಮಗೆ ಲಸಿಕೆ ಲಭ್ಯವಾಗಲಿದೆ. ಬಳಿಕ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಲಿದ್ದೇವೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ದೇಶಗಳ ಯಾದಿಯಲ್ಲಿ ಸದ್ಯ ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ. ಜಾನ್ಸ್‌ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಬ್ರೆಜಿಲ್‌ನಲ್ಲಿ ಈವರೆಗೆ 41,62,073 ಮಂದಿಗೆ ಸೋಂಕು ತಗುಲಿದೆ. ಸೋಂಕಿನಿಂದಾಗಿ 1,,27,464 ಜನ ಸಾವಿಗೀಡಾಗಿದ್ದಾರೆ. 35,68,578 ಮಂದಿ ಗುಣಮುಖರಾಗಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ಅಮೆರಿಕ ಹಾಗೂ ಭಾರತ ಇವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.