ADVERTISEMENT

ಅಂತರರಾಷ್ಟ್ರೀಯ ಪ್ರಯಾಣ– ’ಕೆಂಪು ಪಟ್ಟಿ‘ಗೆ ಭಾರತ: ಬ್ರಿಟನ್‌ ಸರ್ಕಾರ ತೀರ್ಮಾನ

ಪಿಟಿಐ
Published 19 ಏಪ್ರಿಲ್ 2021, 16:10 IST
Last Updated 19 ಏಪ್ರಿಲ್ 2021, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಕೋವಿಡ್‌–19 ಪ್ರಯಾಣ ಕುರಿತ ಕೆಂಪು ಪಟ್ಟಿಗೆ ಬ್ರಿಟನ್‌ ಸೋಮವಾರ ಭಾರತವನ್ನು ಸೇರಿಸಿದ್ದು, ಈ ದೇಶಕ್ಕೆ ಎಲ್ಲ ರೀತಿಯ ಸಂಚಾರವನ್ನು ರದ್ದುಪಡಿಸಿದೆ. ಭಾರತದಿಂದ ಮರಳುವ ಬ್ರಿಟನ್‌ನ ಎಲ್ಲ ಪ್ರಯಾಣಿಕರಿಗೆ 10 ದಿನದ ಕ್ವಾರಂಟೈನ್ ಅನ್ನೂ ಕಡ್ಡಾಯಪಡಿಸಿದೆ.

ಆರೋಗ್ಯ ಕಾರ್ಯದರ್ಶಿ ಮ್ಯಾಟ್‌ ಹ್ಯಾಂಕೊಕ್ ಅವರು ಈ ವಿಷಯ ದೃಢಪಡಿಸಿದ್ದು, ‘ಅಂಕಿ ಅಂಶಗಳ ಪರಿಶೀಲನೆ ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ಈ ಕಠಿಣವಾದ ಅಥವಾ ತುಂಬ ಮುಖ್ಯವಾದ ತೀರ್ಮಾನ ಕೈಗೊಂಡಿದ್ದು,ಕೆಂಪು ಪಟ್ಟಿಗೆ ಭಾರತವನ್ನು ಸೇರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರ ಸೋಂಕಿನ 103 ಪ್ರಕರಣಗಳು ಬ್ರಿಟನ್‌ನಲ್ಲಿ ಪತ್ತೆಯಾಗಿವೆ. ಬಹುತೇಕ ಅಂತರರಾಷ್ಟ್ರೀಯ ಪ್ರಯಾಣಿಕರಿಗೇ ಇದು ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.