ADVERTISEMENT

ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೋರಿಸ್‌ ಜಾನ್ಸನ್‌

ಪಿಟಿಐ
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST
ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದ ಬೋರಿಸ್‌ ಜಾನ್ಸನ್‌ ಅವರು ಅಧಿಕಾರ ಸ್ವೀಕಾರಕ್ಕೆ ಮುನ್ನ ಬುಧವಾರ ಬಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ರಾಣಿ ಎರಡನೇ ಎಲಿಜಬೆತ್‌ ಅವರನ್ನು ಭೇಟಿಯಾದರು  ಎಎಫ್‌ಪಿ ಚಿತ್ರ
ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದ ಬೋರಿಸ್‌ ಜಾನ್ಸನ್‌ ಅವರು ಅಧಿಕಾರ ಸ್ವೀಕಾರಕ್ಕೆ ಮುನ್ನ ಬುಧವಾರ ಬಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ರಾಣಿ ಎರಡನೇ ಎಲಿಜಬೆತ್‌ ಅವರನ್ನು ಭೇಟಿಯಾದರು  ಎಎಫ್‌ಪಿ ಚಿತ್ರ   

ಲಂಡನ್‌:ಬ್ರಿಟನ್‌ನ ನೂತನ ಪ್ರಧಾನಿಯಾಗಿ ಬೋರಿಸ್‌ ಜಾನ್ಸನ್‌ ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬ್ರೆಕ್ಸಿಟ್‌ ಪ್ರಕ್ರಿಯೆಯನ್ನು ಅಕ್ಟೋಬರ್‌ 31ರೊಳಗಾಗಿ ಪೂರ್ಣಗೊಳಿಸುವುದಾಗಿ ಘೋಷಿಸಿದರು.

ಕನ್ಸರ್ವೇಟಿವ್‌ ಪಕ್ಷದ ನಾಯಕ ಮತ್ತು ಪ್ರಧಾನಿ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಬೋರಿಸ್‌, ಅತ್ಯಧಿಕ ಮತಗಳಿಂದ ಜಯಗಳಿಸಿದ್ದರು.ರಾಣಿ ಎರಡನೇಎಲಿಜಬೆತ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹೊಸ ಆಡಳಿತ ರಚನೆಗೆ ಬೋರಿಸ್‌ ಅವರಿಗೆ ರಾಣಿಸೂಚಿಸಿದ್ದಾರೆ ಎಂದು ಬಕಿಂಗ್‌ಹ್ಯಾಮ್‌ ಅರಮನೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ತೆರೇಸಾ ಮೇ ತಮ್ಮ ರಾಜೀನಾಮೆಯನ್ನು ರಾಣಿಗೆ ಸಲ್ಲಿಸಿದ್ದರು.‌

ADVERTISEMENT

**

ದೇಶಕ್ಕೆ ಹೊಸ ಚೈತನ್ಯವನ್ನು ನೀಡುವುದು ನಮ್ಮ ಗುರಿ. ಬ್ರೆಕ್ಸಿಟ್‌ ಪ್ರಕ್ರಿಯೆಯಿಂದ ದೊರೆಯುವಂತಹ ಅವಕಾಶಗಳೆಲ್ಲವನ್ನೂ ಬಳಸಿಕೊಳ್ಳಲಿದ್ದೇವೆ.
–ಬೋರಿಸ್‌ ಜಾನ್ಸನ್‌, ಬ್ರಿಟನ್‌ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.