ADVERTISEMENT

ಬ್ರಿಟನ್ ರಾಜಕುಮಾರ ಚಾರ್ಲ್ಸ್‌ಗೆ ಕೊರೊನಾ ವೈರಸ್ ಪಾಸಿಟಿವ್ ದೃಢ

ರಾಯಿಟರ್ಸ್
Published 25 ಮಾರ್ಚ್ 2020, 11:09 IST
Last Updated 25 ಮಾರ್ಚ್ 2020, 11:09 IST
ಬ್ರಿಟನ್ ರಾಜಕುಮಾರ್ ಚಾರ್ಲ್ಸ್
ಬ್ರಿಟನ್ ರಾಜಕುಮಾರ್ ಚಾರ್ಲ್ಸ್   

ಲಂಡನ್: ಬ್ರಿಟನ್ ಅರಸೊತ್ತಿಗೆಯ ಉತ್ತರಾಧಿಕಾರಿ, ಬ್ರಿಟನ್ ರಾಜಕುಮಾರ ಚಾರ್ಲ್ಸ್‌ಗೆ ಕೊರೊನಾ ವೈರಸ್‌ ಪಾಸಿಟಿವ್ ದೃಢಪಟ್ಟಿದೆ ಎಂದು ಅರಮನೆ ಮೂಲಗಳು ದೃಢಪಡಿಸಿವೆ.

ಬ್ರಿಟನ್ ಮಹಾರಾಣಿ ಎಲಿಜೆಬೆತ್ ಅವರ ಮೊದಲ ಮಗ ಚಾರ್ಲ್ಸ್‌ಗೆ ಈಗ 71 ವರ್ಷ.

'ಪ್ರಿನ್ಸ್ ಆಫ್ ವೇಲ್ಸ್‌ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್‌-19 ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಉಳಿದಂತೆ ಅವರ ಆರೋಗ್ಯ ಉತ್ತಮವಾಗಿದೆ. ಕಳೆದ ಕೆಲ ದಿನಗಳಿಂದ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು' ಎಂದು ಬ್ರಿಟನ್ ಅರಮನೆಯ ಅಧಿಕಾರಿಗಳು ತಿಳಿಸಿದ್ದಾರೆ.ರಾಜಕುಮಾರಚಾರ್ಲ್ಸ್‌ ಅವರ ಪತ್ನಿ ಕ್ಯಾಮಿಲ್ಲಾ ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರ ರಿಪೋರ್ಟ್‌ಕೊರೊನಾ ವೈರಸ್ ನೆಗೆಟಿವ್ ಬಂದಿದೆ.

ADVERTISEMENT

'ಈಚಿನ ದಿನಗಳಲ್ಲಿ ರಾಜಕುಮಾರ ಪ್ರಿನ್ಸ್‌ ಸಾಕಷ್ಟು ಜನರನ್ನು ಭೇಟಿಯಾಗಿದ್ದರು. ಯಾರಿಂದ ಅವರಿಗೆ ಸೋಂಕು ತಗುಲಿರಬಹುದು ಎಂಬ ಖಚಿತ ಮಾಹಿತಿ ಲಭ್ಯವಿಲ್ಲ' ಎಂದು ಅರಮನೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.