ADVERTISEMENT

ಅಮೆರಿಕ ಗುಂಡಿನ ದಾಳಿ : ನಿಯಮಿತವಾಗಿ ಡ್ಯಾನ್ಸ್ ಸ್ಟುಡಿಯೊಗೆ ಬರುತ್ತಿದ್ದ ಹಂತಕ!

ಏಜೆನ್ಸೀಸ್
Published 24 ಜನವರಿ 2023, 2:07 IST
Last Updated 24 ಜನವರಿ 2023, 2:07 IST
   

ಮಾಂಟೆರಿ ಪಾರ್ಕ್, ಅಮೆರಿಕ: ಇಲ್ಲಿನ ಡ್ಯಾನ್ಸ್ ಸ್ಟುಡಿಯೊ ಬಳಿ ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿ 11 ಜನರನ್ನು ಹತ್ಯೆ ಮಾಡಿ, ಬಳಿಕ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟ ಕ್ಯಾನ್ ಟ್ರಾನ್, ಡ್ಯಾನ್ಸ್‌ ಸ್ಟುಡಿಯೊಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

72 ವರ್ಷದ ಏಷ್ಯನ್ ವಲಸಿಗ ಹುಯು ಕ್ಯಾನ್ ಟ್ರಾನ್, ಲಾಸ್ ಏಂಜಲೀಸ್ ಬಳಿಯ ಏಷ್ಯಾದವರೇ ಹೆಚ್ಚು ವಾಸಿಸುತ್ತಿರುವ ನಗರವಾದ ಮಾಂಟೆರಿ ಪಾರ್ಕ್‌ನಲ್ಲಿರುವ ಸ್ಟಾರ್ ಬಾಲ್‌ರೂಮ್ ಡ್ಯಾನ್ಸ್ ಸ್ಟುಡಿಯೊ ಬಳಿ ಗುಂಡಿನ ದಾಳಿ ನಡೆಸಿದ್ದ. ‌42 ಗುಂಡುಗಳನ್ನು ಹೊಂದಿದ್ದ ಅರೆ-ಸ್ವಯಂಚಾಲಿತ ಪಿಸ್ತೂಲ್ ಅನ್ನು ಈ ದಾಳಿಗೆ ಬಳಸಿದ್ದ.

ಏಷ್ಯನ್ ಸಮುದಾಯದ ಅನೇಕರು ಚಾಂದ್ರಮಾನ ರೀತ್ಯ ಹೊಸ ವರ್ಷದ ಸಂಭ್ರಮದ ಸಿದ್ಧತೆಯಲ್ಲಿದ್ದಾಗ ಈ ದಾಳಿ ನಡೆದಿದೆ. ‘ದಾಳಿ ನಡೆಸಿದವನ ಹೆಸರು ಟ್ರಾನ್‌. ವಿಯೆಟ್ನಾಂ, ಚೀನಾದಿಂದ ಅಮೆರಿಕಕ್ಕೆ ವಲಸೆ ಬಂದರು ಎಂದು ಅವರ ಮಾಜಿ ಪತ್ನಿ ಸಿಎನ್ಎನ್ ಸುದ್ದಿ ವಾಹಿನಿಗೆ ಹೇಳಿದ್ದಾರೆ.

ADVERTISEMENT

ಎರಡು ದಶಕಗಳ ಹಿಂದೆ ಸ್ಟಾರ್ ಬಾಲ್ ರೂಂ ಡ್ಯಾನ್ಸ್ ಸ್ಟುಡಿಯೋದಲ್ಲಿ ಟ್ರಾನ್ ಅವರನ್ನು ಭೇಟಿಯಾಗಿದ್ದೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ತಿಳಿಸಿದ್ದಾರೆ.


ಟ್ರಕ್‌ ಡ್ರೈವರ್‌ ಆಗಿದ್ದ ಟ್ರಾನ್‌, ದಾಳಿ ನಡೆದ ಡ್ಯಾನ್ಸ್ ಸ್ಟುಡಿಯೊಗೆ ನಿಯಮಿತವಾಗಿ ಬರುತ್ತಿದ್ದ. ಅಲ್ಲಿನ ಡ್ಯಾನ್ಸ್‌ ಟೀಚರ್‌ ಕುರಿತು ದೂರುತ್ತಿದ್ದ ಎಂದು ಆತನ ಸ್ನೇಹಿತರೊಬ್ಬರು ತಿಳಿಸಿದ್ದಾರೆ.


ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಮನೆ, ಮೂಲದ ಕುರಿತು ಸಾಕಷ್ಟು ಸಂಗತಿಗಳನ್ನು ಪತ್ತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.