ADVERTISEMENT

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು: 63 ಸಾವು, 600ಕ್ಕೂ ಹೆಚ್ಚು ಜನ ನಾಪತ್ತೆ

ಏಜೆನ್ಸೀಸ್
Published 17 ನವೆಂಬರ್ 2018, 8:08 IST
Last Updated 17 ನವೆಂಬರ್ 2018, 8:08 IST
ಕ್ಯಾಲಿಫೊರ್ನಿಯಾದ ವೈಮಾನಿಕ ಚಿತ್ರ
ಕ್ಯಾಲಿಫೊರ್ನಿಯಾದ ವೈಮಾನಿಕ ಚಿತ್ರ   

ಪ್ಯಾರಾಡಿಸ್‌(ಕಾಲಿಫ್):ಉತ್ತರ ಕ್ಯಾಲಿಫೋರ್ನಿಯಾ ‌ನಗರಕ್ಕೆ ತಗುಲಿರುವಕಾಳ್ಗಿಚ್ಚಿಗೆ 63ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 600ಕ್ಕೂ ಮಂದಿ ಹೆಚ್ಚು ನಾಪತ್ತೆಯಾಗಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಕಾಳ್ಗಿಚ್ಚು ಎನ್ನಲಾಗಿದ್ದು,ರಕ್ಷಣಾ ಕಾರ್ಯಾಚರಣೆಗಾಗಿ 5,596 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ಯಾರಾಡಿಸ್‌ ಪಟ್ಟಣದಿಂದ ಸ್ಯಾನ್‌ ಫ್ರಾನ್ಸಿಸ್ಕೋವರೆಗೂ ಹೊಗೆ ಆವರಿಸಿದ್ದು,ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಇದುವರೆಗೆ 12 ಸಾವಿರಕ್ಕೂ ಹೆಚ್ಚು ಮನೆಗಳು ಹಾಗೂ 1,42 ಲಕ್ಷ ಎಕರೆಯಷ್ಟು ಭೂ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ADVERTISEMENT

ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.