ADVERTISEMENT

ಅಧಿಕ ಸುಂಕ: ಅಮೆರಿಕ ವಿರುದ್ಧ WTOನಲ್ಲಿ ದೂರು ದಾಖಲಿಸಿದ ಕೆನಡಾ

ಪಿಟಿಐ
Published 5 ಮಾರ್ಚ್ 2025, 10:26 IST
Last Updated 5 ಮಾರ್ಚ್ 2025, 10:26 IST
ಜಸ್ಟಿನ್‌ ಟ್ರುಡೊ
ಜಸ್ಟಿನ್‌ ಟ್ರುಡೊ   

ಜಿನೀವಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಿಢೀರ್‌ ಸುಂಕ ಹೆಚ್ಚಳದ ನಿರ್ಧಾರ ಖಂಡಿಸಿ ಅಮೆರಿಕ ವಿರುದ್ಧ ಕೆನಡಾ, ವಿಶ್ವ ವ್ಯಾಪಾರ ಸಂಸ್ಥೆಗೆ(ಡಬ್ಲ್ಯುಟಿಒ ) ದೂರು ದಾಖಲಿಸಿದೆ ಎಂದು ಡಬ್ಲ್ಯುಟಿಒ ದೃಢಪಡಿಸಿದೆ.

ಮಂಗಳವಾರ ತಡರಾತ್ರಿ, ಡಬ್ಲ್ಯುಟಿಒನಲ್ಲಿನ ಕೆನಡಾದ ರಾಯಭಾರಿ ನಾಡಿಯಾ ಥಿಯೋಡರ್ ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಮೆರಿಕ ನಿರ್ಧಾರದ ವಿರುದ್ಧ ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ ಎಂದು ಬರೆದುಕೊಂಡಿದ್ದಾರೆ.

ಕೆನಡಾ ಮೇಲಿನ ನ್ಯಾಯಸಮ್ಮತವಲ್ಲದ ಸುಂಕಗಳಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರದೊಂದಿಗೆ ಡಬ್ಲ್ಯುಡಿಒ ಸಮಾಲೋಚನೆ ನಡೆಸಬೇಕೆಂದು ಕೋರಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ಚೀನಾದ ಸರಕುಗಳ ಮೇಲೆ ಅಮೆರಿಕದ ಹೊಸ ಸುಂಕಗಳ ಕುರಿತು ಚೀನಾ ಸಲ್ಲಿಸಿದ ಇದೇ ರೀತಿಯ ದೂರಿನ ನಂತರ, ಕೆನಡಾ ಹೆಚ್ಚುವರಿ ಸುಂಕಗಳ ಕುರಿತು ಡಬ್ಲ್ಯುಟಿಒನಲ್ಲಿ ಅಮೆರಿಕ ವಿರುದ್ಧ ದೂರು ದಾಖಲಿಸಿದೆ.

ಜನವರಿ 20ರಂದು ಅಧಿಕಾರಕ್ಕೆ ಮರಳಿದ್ದ ಡೊನಾಲ್ಡ್ ಟ್ರಂಪ್, ಪ್ರಮುಖ ವ್ಯಾಪಾರ ಪಾಲುದಾರರಾದ ಕೆನಡಾ ಮತ್ತು ಮೆಕ್ಸಿಕೊದಿಂದ ಆಮದುಗಳ ಮೇಲೆ ಶೇ 25ರಷ್ಟು ಸುಂಕಗಳನ್ನು ಘೋಷಿಸಿ, ಬಳಿಕ, ತಾತ್ಕಾಲಿಕವಾಗಿ ತಡೆಹಿಡಿದಿದ್ದರು. ಆದರೆ, ಮಂಗಳವಾರದಿಂದ ಹೊಸ ಸುಂಕಗಳು ಜಾರಿಗೆ ಬಂದಿವೆ.

ಅಕ್ರಮ ವಲಸೆ ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ನಿಲ್ಲಿಸುವಲ್ಲಿ ಕೆನಡಾ ಮತ್ತು ಮೆಕ್ಸಿಕೊ ವಿಫಲವಾಗಿವೆ ಎಂದು ಟ್ರಂಪ್ ಆರೋಪಿಸಿದ್ದರು.

ಅಮೆರಿಕ ತೆರಿಗೆಗೆ ಕೆನಡಾ ಪ್ರತಿರೋಧ ಒಡ್ಡಿದ ಬೆನ್ನಲ್ಲೇ ಮತ್ತಷ್ಟು ತೆರಿಗೆ ಬೆದರಿಕೆಯನ್ನು ಟ್ರಂಪ್ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.