ADVERTISEMENT

ಕೆನಡಾ: ಖಾಲಿಸ್ತಾನಿ ನಾಯಕನ ಬಂಧನ

ಪಿಟಿಐ
Published 23 ಸೆಪ್ಟೆಂಬರ್ 2025, 14:10 IST
Last Updated 23 ಸೆಪ್ಟೆಂಬರ್ 2025, 14:10 IST
ಖಲಿಸ್ತಾನಿ ಬೆಂಬಲಿಗರು (ಪಿಟಿಐ ಸಂಗ್ರಹ ಚಿತ್ರ)
ಖಲಿಸ್ತಾನಿ ಬೆಂಬಲಿಗರು (ಪಿಟಿಐ ಸಂಗ್ರಹ ಚಿತ್ರ)   

ಟೊರೊಂಟೊ: ಬಂದೂಕುಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದ ಡಜನ್‌ಗೂ ಹೆಚ್ಚು ಪ್ರಕರಣಗಳಲ್ಲಿನ ಅಪರಾಧಕ್ಕಗಿ ಖಾಲಿಸ್ತಾನಿ ನಾಯಕ ಇಂದ್ರಜೀತ್ ಸಿಂಗ್ ಗೋಸಲ್‌ (36) ಅವರನ್ನು ಕೆನಡಾ ಪೊಲೀಸರು ಒಂಟಾರಿಯೊದ ವಿಟ್‌ಬಿಯಲ್ಲಿ ಬಂಧಿಸಿದ್ದಾರೆ. 

ಒಂಟಾರಿಯೊದ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳು ಅವರನ್ನು ಶುಕ್ರವಾರ ಬಂಧಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ‘ಗ್ಲೋಬಲ್ ನ್ಯೂಸ್‌’ ಸೋಮವಾರ ವರದಿ ಮಾಡಿದೆ.

ಗೋಸಲ್ ಸೋಮವಾರ ಓಶಾವಾ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಅವರ ಜೊತೆಗೆ ಟೊರೊಂಟೊದ ಅರ್ಮಾನ್ ಸಿಂಗ್ (23) ಮತ್ತು ನ್ಯೂಯಾರ್ಕ್ ನಿವಾಸಿ ಜಗದೀಪ್ ಸಿಂಗ್ (41) ಅವರನ್ನೂ ಆರೋಪಿಗಳು ಎಂದು ಹೆಸರಿಸಲಾಗಿದೆ.

ADVERTISEMENT

ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರವನ್ನು ಪ್ರತಿಪಾದಿಸುವ ‘ಸಿಖ್ಸ್ ಫಾರ್ ಜಸ್ಟೀಸ್‌’ನ (ಎಸ್‌ಎಫ್‌ಜಿ) ಸದಸ್ಯನಾಗಿರುವ ಗೋಸಲ್ ಖಾಲಿಸ್ತಾನದ ಕುರಿತು ಜನಾಭಿಪ್ರಾಯ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ.

ಈ ಹಿಂದೆ ಅದನ್ನು ಹರ್ದೀಪ್ ಸಿಂಗ್ ನಿಜ್ಜರ್ ನಡೆಸುತ್ತಿದ್ದರು. ಅವರನ್ನು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುಂಡಿಕ್ಕಿ ಕೊಂದ ನಂತರ ಅವರು ಈ ಹುದ್ದೆಯನ್ನು ವಹಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.