ADVERTISEMENT

ರಷ್ಯಾ ರಾಯಭಾರ ಕಚೇರಿ ಗೇಟಿಗೆ ಸ್ಪೋಟಕಗಳಿದ್ದ ಕಾರು ಡಿಕ್ಕಿ

ಕಾರು ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಸಾವು

ಏಜೆನ್ಸೀಸ್
Published 6 ಏಪ್ರಿಲ್ 2022, 14:27 IST
Last Updated 6 ಏಪ್ರಿಲ್ 2022, 14:27 IST
ರಷ್ಯಾ ರಾಯಭಾರ ಕಚೇರಿಯ ಗೇಟಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿರುವ ಕಾರು
ರಷ್ಯಾ ರಾಯಭಾರ ಕಚೇರಿಯ ಗೇಟಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿರುವ ಕಾರು   

ಬುಕರೆಸ್ಟ್ (ಎಪಿ): ಬೆಂಕಿಸುಲಭವಾಗಿ ವ್ಯಾಪಿಸುವ ವಸ್ತುಗಳನ್ನು ಹೊಂದಿದ್ದ ಸರಕು ಇದ್ದ ಕಾರೊಂದು ರೊಮಾನಿಯಾ ರಾಜಧಾನಿ ಬುಕರೆಸ್ಟ್‌ನಲ್ಲಿ ರಷ್ಯಾದ ರಾಜತಾಂತ್ರಿಕ ಕಚೇರಿ ಗೇಟಿಗೆ ಡಿಕ್ಕಿ ಹೊಡೆದಿದೆ. ಬೆಂಕಿ ಹೊತ್ತಿಕೊಂಡು ಕಾರು ಚಾಲಕ ಮೃತಪಟ್ಟಿದ್ದಾನೆ.

ಬುಧವಾರ ಬೆಳಿಗ್ಗೆ 6 ಗಂಟೆ ವೇಳೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ದೌಡಾಯಿಸಿದಅಗ್ನಿಶಾಮಕ ಸೇವೆ, ಭದ್ರತಾ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಕಾರಿನಲ್ಲಿ ಹಲವು ಸರಕುಗಳು ಪತ್ತೆಯಾಗಿವೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ರಷ್ಯಾದ ರಾಯಭಾರ ಕಚೇರಿಯು, 'ಅವಘಡದಲ್ಲಿ ಸಿಬ್ಬಂದಿಗೆ ಗಾಯವಾಗಿಲ್ಲ. ಬುಕಾದಲ್ಲಿ ರಷ್ಯಾ ಯೋಧರು ನರಮೇಧ ನಡೆಸಿದ್ದಾರೆ ಎಂದು ಪ್ರಚೋದನೆಗೊಂಡು ಕೃತ್ಯ ಎಸಗಿರುವ ಶಂಕೆ ಇದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.