ADVERTISEMENT

ಮಿಷಿಗನ್‌, ಮಿನ್ನೆಸೋಟಾದಲ್ಲಿ ಕೋವಿಡ್‌-19 ಪ್ರಕರಣ ಹೆಚ್ಚಳ

ಏಜೆನ್ಸೀಸ್
Published 17 ನವೆಂಬರ್ 2021, 8:23 IST
Last Updated 17 ನವೆಂಬರ್ 2021, 8:23 IST
ಕೋವಿಡ್‌
ಕೋವಿಡ್‌   

ಮಿಷಿಗನ್‌: ಅಮೆರಿಕದ ಮಿಷಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಹಾಸಿಗೆಗಳು ಭರ್ತಿಯಾಗಿವೆ.

ವಾರದಲ್ಲಿ ಮಿಷಿಗನ್‌ ಆಸ್ಪತ್ರೆಗಳಲ್ಲಿ ಕೋವಿಡ್‌–19ರ 3 ಸಾವಿರಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. ಮಿನ್ನೆಸೊಟಾದ ಬಹುತೇಕ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಭರ್ತಿಯಾಗಿದ್ದಾರೆ. ಅಮೆರಿಕದಲ್ಲಿನ ಈ ಎರಡೂ ರಾಜ್ಯಗಳು ಕೋವಿಡ್‌ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಿವೆ.

‘ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ದಾಖಲಾಗುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ’ ಎಂದು ‘ಡೆಟ್ರಾಯಿಟ್‌ನ ಹೆನ್ರಿ ಫೋರ್ಡ್ ಹೆಲ್ತ್ ಸಿಸ್ಟಮ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಬ್ ರಿನಿ ಹೇಳಿದ್ದಾರೆ.

ADVERTISEMENT

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ದೇಶದ ದಕ್ಷಿಣ ಭಾಗದಲ್ಲಿ ಸೋಂಕು ದೃಢ ಪ್ರಮಾಣವೂ ಕಡಿಮೆಯಾಗಿದ್ದು, ಮಾಸ್ಕ್‌ ಹಾಕಿಕೊಳ್ಳುವ ನಿರ್ಬಂಧಗಳನ್ನು ಕೆಲವೆಡೆ ತೆರವುಮಾಡಲಾಗಿದೆ. ಆದರೆ ಈಶಾನ್ಯ ಮತ್ತು ಮಧ್ಯ ಪಶ್ಚಿಮ ಭಾಗದ ಮೇಲ್ಭಾಗದಲ್ಲಿ ಸೋಂಕು ತೀವ್ರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.