ADVERTISEMENT

ಸಾಕಿದಾತನನ್ನೇ ಸಾಯಿಸಿದ ಪಕ್ಷಿ

ಪಿಟಿಐ
Published 16 ಏಪ್ರಿಲ್ 2019, 2:46 IST
Last Updated 16 ಏಪ್ರಿಲ್ 2019, 2:46 IST
ಕ್ಯಾಸ್ಸೊವಾರಿ
ಕ್ಯಾಸ್ಸೊವಾರಿ   

ಹ್ಯೂಸ್ಟನ್‌: ವಿಶ್ವದ ಅತ್ಯಂತ ಅಪಾಯಕಾರಿ ಕ್ಯಾಸೊವಾರಿ ಪಕ್ಷಿ ಫ್ಲಾರಿಡಾದ ತೋಟದಲ್ಲಿ ತನ್ನನ್ನು ಸಾಕಿದಾತನನ್ನೇ ಕಚ್ಚಿ ಸಾಯಿಸಿದೆ.

‘ಎಮು ಪ್ರಭೇದಕ್ಕೆ ಸೇರಿದ ಅಪರೂಪದ ಪಕ್ಷಿಯಿದು. ಮರ್ವಿನ್‌ ಹೆಜೋ (75) ಪಕ್ಷಿ ದಾಳಿಯಿಂದ ಮೃತಪಟ್ಟವರು. ಗೈನೆಸ್‌ವಿಲ್ಲೆಯ ತನ್ನ ತೋಟದ ಮನೆಯ ಸಮೀಪ ಕುಸಿದು ಬಿದ್ದಾಗ ಹಕ್ಕಿ ಏಕಾಏಕಿ ದಾಳಿ ನಡೆಸಿದೆ’ ಎಂದು ಅಲಾಚುವಾ ಕೌಂಟಿ ಷೆರಿಫ್‌ನ ಅಧಿಕಾರಿ ಹೇಳಿದರು.

ಹಾರಲಾಗದ ದೊಡ್ಡ ಗಾತ್ರದ ಪಕ್ಷಿ ಇದು. ಆಸ್ಟ್ರೇಲಿಯಾ, ನ್ಯೂಜಿನಿಯಾ ದೇಶಗಳ ಮಳೆಕಾಡುಗಳಲ್ಲಿ ವಾಸಿಸುತ್ತದೆ. ಕೂದಲ ಹೊದಿಕೆಯಂತೆ ಕಾಣುವ ಎರಡು ರೆಕ್ಕೆಗಳು ದೇಹವನ್ನು ಆವರಿಸಿ ಮಳೆ ಚಳಿಯಿಂದ ರಕ್ಷಣೆ ಕೊಡುತ್ತವೆ.ಬಣ್ಣ ಬಣ್ಣದ ಉದ್ದ ಕುತ್ತಿಗೆ, ತಲೆಯ ಮೇಲೆ ಹೆಲ್ಮೆಟ್ ನಂತಹ ಕಿರೀಟ, ಸದೃಢವಾದ ಉದ್ದ ಕಾಲುಗಳಲ್ಲಿ ಚೂಪಾದ ಬಲಿಷ್ಟವಾದ ಉಗುರುಗಳನ್ನು ಈ ಪಕ್ಷಿಗಳು ಪಡೆದಿವೆ. ಹಣ್ಣುಗಳು ಇದರ ಮುಖ್ಯ ಆಹಾರ.

ಮಳೆಕಾಡುಗಳ ಕೆಲ ಮರಗಳು ತಮ್ಮ ಬೀಜಪ್ರಸರಣಕ್ಕೆ ಈ ಹಕ್ಕಿಗಳನ್ನೇ ಆಶ್ರಯಿಸಿವೆ. ಹೆಚ್ಚಾಗಿ ಒಂಟಿಯಾಗಿ ವಾಸಿಸುತ್ತದೆ. ವೈರಿಗಳೆದುರಾದರೆ ತನ್ನ ಬಲಿಷ್ಟ ಉಗುರುಗಳಿಂದ ದಾಳಿ ಮಾಡುವ ಆಕ್ರಮಣಕಾರಿಯಿದು. ಹೆಣ್ಣು ಹಕ್ಕಿ ಇಟ್ಟಮೊಟ್ಟೆಗಳಿಗೆ ಗಂಡು ಹಕ್ಕಿ ಕಾವು ಕೊಡುತ್ತದೆ. ಅಷ್ಟೇ ಅಲ್ಲದೆ ಮರಿಗಳಾದ ಮೇಲೆ ಅವುಗಳನ್ನು ಒಂಬತ್ತು ತಿಂಗಳು ಸಾಕುವ ಜವಾಬ್ದಾರಿಯೂ ಗಂಡು ಹಕ್ಕಿಯದ್ದೇ ಆಗಿರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.