ADVERTISEMENT

ಚಿಲಿ: ತುರ್ತು ಪರಿಸ್ಥಿತಿ ಮುಂದುವರಿಕೆ

ಮೂರು ದಿನದಲ್ಲಿ 11 ಜನರ ಸಾವು, 1,500 ಜನರ ಬಂಧನ

ಏಜೆನ್ಸೀಸ್
Published 21 ಅಕ್ಟೋಬರ್ 2019, 17:10 IST
Last Updated 21 ಅಕ್ಟೋಬರ್ 2019, 17:10 IST
ಸ್ಯಾಂಟಿಯಾಗೊದಲ್ಲಿ ಭಾನುವಾರ ಪ್ರತಿಭಟನಾನಿರತ ವ್ಯಕ್ತಿಯೊಬ್ಬರನ್ನು ಬಂಧಿಸಿದ ಪೊಲೀಸರು  –ಎಎಫ್‌ಪಿ ಚಿತ್ರ
ಸ್ಯಾಂಟಿಯಾಗೊದಲ್ಲಿ ಭಾನುವಾರ ಪ್ರತಿಭಟನಾನಿರತ ವ್ಯಕ್ತಿಯೊಬ್ಬರನ್ನು ಬಂಧಿಸಿದ ಪೊಲೀಸರು –ಎಎಫ್‌ಪಿ ಚಿತ್ರ   

ಸ್ಯಾಂಟಿಯಾಗೊ:ಮೆಟ್ರೊ ರೈಲುಗಳ ಟಿಕೆಟ್‌ ದರ ಹೆಚ್ಚಳ ಹಾಗೂ ಸಾಮಾಜಿಕ ಅಸಮಾನತೆ
ಯನ್ನುವಿರೋಧಿಸಿ ನಡೆಯುತ್ತಿರುವಪ್ರತಿಭಟನೆ ಹಿಂಸಾತ್ಮಕ ರೂಪಪಡೆದಿದೆ. ಭಾನುವಾರದವರೆಗೆ ಸ್ಯಾಂಟಿಯಾಗೊ ನಗರದಲ್ಲಿ ಘರ್ಷಣೆಯಲ್ಲಿ 11 ಜನರು ಮೃತಪಟ್ಟಿದ್ದು, 1,500 ಜನರನ್ನು ಬಂಧಿಸಲಾಗಿದೆ. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿ ನಿಭಾಯಿಸಲುಚಿಲಿಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಸೇನಾ ಸಿಬ್ಬಂದಿ ನಿಯೋಜಿಸಿದ್ದು,ಸೇನಾ ಮುಖ್ಯಸ್ಥ ಜೇವಿಯರ್‌ ಇಟುರ್‍ರಿಗಾ ಅವರೊಂದಿಗೆ ಸೋಮವಾರತುರ್ತು ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಚಿಲಿ ಯುದ್ಧದ ಸ್ಥಿತಿಯಲ್ಲಿದೆ.ಯಾರಿಗೂ ಗೌರವ ಕೊಡದ, ಹಿಂಸೆ ಹಾಗೂ ಅಪರಾಧದ ರೂಪ ತಾಳಿರುವಬಲಶಾಲಿಯಾದ ಶತ್ರುವಿನ ವಿರುದ್ಧ ನಾವು ಯುದ್ಧಕ್ಕೆ ಇಳಿದಿದ್ದೇವೆ’ ಎಂದು ತಿಳಿಸಿದರು.

ADVERTISEMENT

ರಾಜಧಾನಿಸ್ಯಾಂಟಿಯಾಗೊ ಸೇರಿದಂತೆ ಚಿಲಿಯ 16 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, 9,500ಕ್ಕೂ ಅಧಿಕ ಪೊಲೀಸ್‌ ಹಾಗೂ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಕಾರರು,ಮೆಟ್ರೊ ನಿಲ್ದಾಣಗಳ ಮೇಲೆ ದಾಳಿ ನಡೆಸಿದ್ದು, ಬಸ್‌, ಸೂಪರ್‌ಮಾರ್ಕೆಟ್‌ಗಳಿಗೂ ಬೆಂಕಿ ಹಚ್ಚಿದ್ದರು. ಮೆಟ್ರೊ ಟಿಕೆಟ್‌ ದರ ಇಳಿಸುವುದಾಗಿ ಶನಿವಾರ ಪಿನೆರಾ ಘೋಷಿಸಿದ್ದರೂ, ಪ್ರತಿಭಟನೆ ಮುಂದುವರಿದಿದೆ. ಹಲವೆಡೆ ಪ್ರತಿಭಟನಕಾರರು ಸೂಪರ್‌ಮಾರ್ಕೆಟ್‌ಗಳಿಗೆ ನುಗ್ಗಿ, ಲೂಟಿ ಮಾಡಿದ್ದಾರೆ.ಭಾನುವಾರ ಸ್ಯಾಂಟಿಯಾಗೊ ಹೊರವಲಯದಲ್ಲಿ ಜವಳಿ ಕಾರ್ಖಾನೆಯೊಂದಕ್ಕೆ ಪ್ರತಿಭಟನಕಾರರು ಬೆಂಕಿ ಹಚ್ಚಿದ ಪರಿಣಾಮ ಐವರು ಮೃತಪಟ್ಟಿದ್ದರು.

ಸಹಜ ಸ್ಥಿತಿಯತ್ತ

‘ಸತತ ಮೂರು ದಿನಗಳ ಘರ್ಷಣೆ ನಂತರ ಸ್ಯಾಂಟಿಯಾಗೊ ಸೇರಿದಂತೆ ಇತರೆ ಪ್ರಾಂತ್ಯಗಳಲ್ಲಿ ಸೋಮವಾರ ಸಹಜ ಸ್ಥಿತಿ ಇತ್ತು. ಹೀಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಸೇನಾ ಪಡೆಗಳು ಗಸ್ತಿನಲ್ಲಿ ಇರಲಿವೆ’ ಎಂದು ಸೇನಾ ಮುಖ್ಯಸ್ಥ ಜೇವಿಯರ್‌ ಇಟುರ್‍ರಿಗಾ ತಿಳಿಸಿದ್ದಾರೆ.

400ಕ್ಕೂ ಅಧಿಕ ಬಸ್‌ಗಳು ರಸ್ತೆಗಳಿದಿದ್ದು, ಪೂರ್ವ–ಪಶ್ಚಿಮ ಮೆಟ್ರೊ ಮಾರ್ಗವನ್ನು ಪುನರಾರಂಭಿಸಲಾಗಿತ್ತು. ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.