ADVERTISEMENT

ಕೊರೊನಾ ಲಸಿಕೆ ಮಿಶ್ರಣ ಪ್ರಯೋಗಕ್ಕೆ ಚೀನಾ ಒಪ್ಪಿಗೆ

ಏಜೆನ್ಸೀಸ್
Published 11 ಆಗಸ್ಟ್ 2021, 14:20 IST
Last Updated 11 ಆಗಸ್ಟ್ 2021, 14:20 IST
.
.   

ಬೀಜಿಂಗ್‌: ಲಸಿಕೆ ಮಿಶ್ರಣ ಕುರಿತ ಪ್ರಯೋಗಕ್ಕೆ ಚೀನಾದ ಔಷಧ ನಿಯಂತ್ರಣ ಪ್ರಾಧಿಕಾರ ಬುಧವಾರ ಅನುಮೋದನೆ ನೀಡಿದೆ.

ಚೀನಾದ ‘ಸಿನೋವ್ಯಾಕ್‌’ ಮತ್ತು ಅಮೆರಿಕದ ಫಾರ್ಮಾಸ್ಯೂಟಿಕಲ್‌ ಕಂಪನಿ ಅಭಿವೃದ್ಧಿಪಡಿಸಿರುವ ‘ಇನೊವಿಯೊ’ ಲಸಿಕೆಯ ಮಿಶ್ರಣಗಳ ಸಾಮರ್ಥ್ಯದ ಬಗ್ಗೆ ಪ್ರಯೋಗ ನಡೆಯಲಿದೆ.

ಕ್ಲಿನಿಕಲ್‌ ಪ್ರಯೋಗಕ್ಕೆ ಮುನ್ನ ನಡೆದ ಪ್ರಾಥಮಿಕ ಅಧ್ಯಯನ ಪ್ರಕಾರ ಎರಡು ವಿಭಿನ್ನ ಲಸಿಕೆಗಳನ್ನು ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಸಮಗ್ರವಾದ ಅಧ್ಯಯನ ಅಗತ್ಯವಿದೆ ಎಂದು ’ಇವೊನಿಯೊ’ ಲಸಿಕೆ ತಯಾರಿಕೆಯಲ್ಲಿ ಚೀನಾದ ಜತೆ ಸಹಭಾಗಿತ್ವ ಹೊಂದಿರುವ ಅಡ್ವಾಕ್ಸಿನ್‌ ಬಯೋಫಾರ್ಮಾಸ್ಯೂಟಿಕಲ್‌ ಸುಝೋಯು ಅಧ್ಯಕ್ಷ ವಾಂಗ್‌ ಬಿನ್‌ ತಿಳಿಸಿದ್ದಾರೆ.

ADVERTISEMENT

ಎರಡು ವಿಭಿನ್ನ ಲಸಿಕೆಗಳ ಬಳಕೆ ಸುರಕ್ಷಿತ ಅಥವಾ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎನ್ನುವ ಬಗ್ಗೆ ಹೆಚ್ಚಿನ ಅಧ್ಯಯನ, ಪ್ರಯೋಗಗಳು ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.