ADVERTISEMENT

ಚೀನಾ: ಕೋವಿಡ್‌ ನಿರ್ಬಂಧ ಸಡಿಲ 

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 11:25 IST
Last Updated 8 ಡಿಸೆಂಬರ್ 2022, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್; ಕೋವಿಡ್ ನಿಯಂತ್ರಣಕ್ಕೆ ಹೇರಲಾಗಿದ್ದ‘ಶೂನ್ಯ’ ಕೋವಿಡ್‌ ಕಠಿಣ ನಿಯಮಗಳನ್ನು ಗುರುವಾರ ಸಡಿಲಗೊಳಿಸಿರುವ ಚೀನಾ, ಜನಜೀವನ ಸಹಜ ಸ್ಥಿತಿಗೆ ತರಲು ಹಲವು ಕ್ರಮಗಳನ್ನು ಕೈಗೊಂಡಿದೆ.

ನಿರ್ಬಂಧಗಳನ್ನು ತೆರುವು ಮಾಡುತ್ತಿದ್ದಂತೆ ಸೋಂಕು ಹೆಚ್ಚಾಗುವ ಆತಂಕವೂ ಕಾಡುತ್ತಿದೆ.

ದೇಶದಲ್ಲಿ ಗುರುವಾರ 21,165 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಡಿಮೆ ಸಂಖ್ಯೆಯು ಕಡಿಮೆ ಸೋಂಕುಗಳನ್ನು ಪ್ರತಿಬಿಂಬಿಸುತ್ತದೆಯೇ ಅಥವಾ ಪರೀಕ್ಷೆಯಲ್ಲಿ ಕಡಿತವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ADVERTISEMENT

ರಾಷ್ಟ್ರೀಯ ಆರೋಗ್ಯ ಆಯೋಗವು ಬುಧವಾರ ಲಾಕ್‌ಡೌನ್ ಸಡಿಲಿಕೆ ಮತ್ತು ಕೋವಿಡ್ ಪರೀಕ್ಷೆಯನ್ನು ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕುವುದು ಸೇರಿದಂತೆ ಕೆಲವು ಕ್ರಮಗಳನ್ನು ಕೈಗೊಂಡಿದೆ.

‘ನಾವು ಯಾವಾಗಲೂ ಹಿಂದಿನ ನಿಯಮಗಳಿಗೆ ಅಂಟಿಕೊಳ್ಳಲು ಆಗುವುದಿಲ್ಲ. ಜೀವನ ಮುಂದೆ ಸಾಗಬೇಕು’ ಎಂದು 70 ವರ್ಷದ ಬೀಜಿಂಗ್ ನಿವಾಸಿ ಷಿಗುಯಿಜುನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.