ADVERTISEMENT

ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಸ್ಥಗಿತ ಅಮೆರಿಕಕ್ಕೆ ಚೀನಾ ಒತ್ತಾಯ

₹15.082 ಕೋಟಿ ಮೊತ್ತದ ಮಾರಾಟ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 18:39 IST
Last Updated 9 ಜುಲೈ 2019, 18:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ತೈವಾನ್‌ಗೆ ₹15.082 ಕೋಟಿ ಮೊತ್ತದ ಶಸ್ತ್ರಾಸ್ತ್ರ ಮಾರಾಟವನ್ನು ಅಮೆರಿಕ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಚೀನಾ ಮಂಗಳವಾರ ಒತ್ತಾಯಿಸಿದೆ. ಈ ಶಸ್ತ್ರಾಸ್ತ್ರಗಳಲ್ಲಿ ಯುದ್ಧ ಟ್ಯಾಂಕ್‌, ವಿಮಾನ ಹೊಡೆದುರುಳಿಸಬಲ್ಲ ಕ್ಷಿಪಣಿ ಸೇರಿವೆ. ಈ ಮಾರಾಟದಿಂದಾಗಿ ಚೀನಾ ಮತ್ತು ಅಮೆರಿಕ ನಡುವೆ ಈಗಾಗಲೇ ಇರುವ ಉದ್ವಿಗ್ನ ಸ್ಥಿತಿಗೆ ತುಪ್ಪ ಸುರಿದಂತೆ ಆಗುವ ಸಾಧ್ಯತೆ ಇದೆ.

ಪ್ರಜಾಪ್ರಭುತ್ವ ಮಾದರಿ ಆಡಳಿತ ಹೊಂದಿರುವ ದ್ವೀಪರಾಷ್ಟ್ರ ತೈವಾನ್‌ಗೆ ಅಮೆರಿಕ ಮೊದಲ ಬಾರಿಗೆ ಮಾಡುತ್ತಿರುವ ಸೇನಾ ಸಾಮಗ್ರಿ ಮಾರಾಟ ಇದಾಗಿದೆ. ಅಮೆರಿಕ ಮತ್ತು ಚೀನಾ ಈಗಾಗಲೇ ‘ವ್ಯಾಪಾರ ಯುದ್ಧ’ ದಲ್ಲಿ ತೊಡಗಿರುವ ವೇಳೆಯಲ್ಲೇ ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡಲಾಗುತ್ತಿದೆ.

ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾ ಅಮೆರಿಕದ ವಿರುದ್ಧ ದೂರು ದಾಖಲಿಸಿದೆ. ‘ಇದೊಂದು ಬಲವಾದ ಅಸಮಾಧಾನಕರ ಮತ್ತು ವಿರೋಧದ ನಿರ್ಧಾರ’ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ಗೆಂಗ್‌ ಶುಯಾಂಗ್‌ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.